ವಾಷಿಂಗ್ಟನ್ ನ ಆ ಒಂದು ಪೋಸ್ಟ್ ನಿಂದ ರೊಚ್ಚಿಗೆದ್ದ ISRO : BMTC ಗೆ ಸೆಡ್ಡು ಹೊಡೆಯಿತಾ…!

0
10124
ISRO-space-launch- vehicle-BMTC-INDIA
ಭಾರತೀಯ ವಿಜ್ಞಾನಿಗಳನ್ನು ಟೀಕಿಸಿದ್ದ ವಾಷಿಂಗ್ಟನ್ ಪೋಸ್ಟ್ ಕಾರ್ಟೋನ್.

ಮೈಸೂರು, ಫೆ.16, 2017 : (www.justkannada.in news ) ಆತ್ಮವಿಶ್ವಾಸ, ಸಾಧಿಸುವ ಛಲ ಇದ್ದರೆ ಸಾಕು ಅಸಾಧ್ಯವೆನ್ನುವುದು ಯಾವುದು ಇಲ್ಲ. ಇದಕ್ಕೆ ಜೀವಂತ ನಿದರ್ಶನ ಭಾರತದ ಬಾಹ್ಯಕಾಶ ಸಂಶೋಧನಾ ಸಂಸ್ಥೆ `ಇಸ್ರೋ’ದ ವಿಜ್ಞಾನಿಗಳು..

ಹೌದು, ದಶಕಗಳ ಹಿಂದೆ ಇದೇ ಇಸ್ರೋದ SLV (Space launch vehicle ) ಯನ್ನು see love vehicle ಎಂದು ವಿದೇಶಿಗರು ಕಿಚಾಯಿಸುತ್ತಿದ್ದರು. ಕಾರಣ ಭಾರತ ಉಡಾಯಿಸಿದ ಬಹುತೇಕ ಉಪಗ್ರಹಗಳು ನಿರ್ಧಿಷ್ಠ ಕಕ್ಷೆ ಸೇರಲು ವಿಫಲವಾಗಿ ಸಮುದ್ರದ ಪಾಲಾಗುತ್ತಿದ್ದದ್ದು. ಈ ಸಮಯದಲ್ಲೇ ಅಮೇರಿಕಾದ ಪತ್ರಿಕೆ ` ವಾಷಿಂಗ್ಟನ್ ಪೋಸ್ಟ್ ‘ ಕಾರ್ಟೋನ್ ಒಂದನ್ನು ಪ್ರಕಟಿಸುವ ಮೂಲಕ ಭಾರತದ ವಿರುದ್ಧ ತೀರ ಸಣ್ಣಮಟ್ಟದ ಕುಚೋದ್ಯವಾಡಿತು. ಭಾರತೀಯರು ` ದನ ಕಾಯಲು ಲಾಯಕ್ಕೆ ಹೊರತು ಬಾಹ್ಯಕಾಶಕ್ಕೆ ಉಪಗ್ರಹ ಉಡಾಯಿಸಲು ಅಲ್ಲ.. ‘ ಎಂಬರ್ಥದ ವ್ಯಂಗ್ಯಚಿತ್ರವನ್ನು ಪತ್ರಿಕೆ ಪ್ರಕಟಿಸಿತ್ತು.

 

ಆದರೆ ಈಗ ಕಾಲ ಬದಲಾಗಿದೆ, ಭಾರತೀಯ ಬಾಹ್ಯಕಾಶ ಸಂಸ್ಥೆ ವಿಜ್ಞಾನಿಗಳು ರಾಕೆಟ್ ಉಡಾವಣೆಯನ್ನು BMTC ರೇಂಜ್ ಗೆ ತಂದು ನಿಲ್ಲಿಸಿದ್ದಾರೆ. ಒಂದಲ್ಲ, ಎರಡಲ್ಲ, ಮೂರಲ್ಲ…ಬರೋಬ್ಬರಿ ನೂರು ಪ್ಲಸ್ ಉಪಗ್ರಹಗಳನ್ನು ಬೇಕಾದರೂ ಒಂದೇ ರಾಕೆಟ್ ನಲ್ಲಿ ಉಡಾಯಿಸ ಬಲ್ಲೆವು ಎಂಬುದು ನಿರೂಪಿಸಿದ್ದಾರೆ.

ಆಮೂಲಕ ಅಂದು ಕಾಲೆಳೆದಿದ್ದವರೇ ಇಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾರೆ. ಪಾಪಾ ಭಾರತೀಯ ವಿಜ್ಞಾನಿಗಳನ್ನು ಇಷ್ಟೊಂದು ರೊಚ್ಚಿಗೆಳಿಸಬಾರದಿತ್ತು.

 
key words : ISRO-space-launch- vehicle-BMTC-INDIA