ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ: ಪ್ರಕರಣದ ಹಿತದೃಷ್ಟಿಯಿಂದ ಏನು ಹೇಳಲು ಸಾದ್ಯವಿಲ್ಲ- ಗೃಹ ಸಚಿವ ರಾಮಲಿಂಗರೆಡ್ಡಿ….

0
197
investigation -Gauri Lankesh -murder case –progress- Home Minister Ramalinga Reddy.

ಮೈಸೂರು,ಅ,12,2017(www.justkannada.in): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಪ್ರಕರಣದ ಹಿತದೃಷ್ಟಿಯಿಂದ ಏನು ಹೇಳಲು ಸಾದ್ಯವಿಲ್ಲ ಎಂದು ಗೃಹ ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.investigation -Gauri Lankesh -murder case –progress- Home Minister Ramalinga Reddy.

ಮೈಸೂರಿನಲ್ಲಿ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ,  ಪ್ರಕರಣದ ತನಿಖೆಯ ಜವಾಬ್ದಾರಿಯನ್ನ ಎಸ್ ಐಟಿಗೆ ವಹಿಸಲಾಗಿದ್ದು, ಎಸ್.ಐ.ಟಿ. ತನಿಖೆ ನಡೆಸುತ್ತಿದೆ. ಈ ಪ್ರಕರಣಗಳಲ್ಲಿ ಟೈಂ ಬಾಂಡ್ ಹೇಳೋಕೆ ಆಗೋದಿಲ್ಲ. ಗೌರಿ ಲಂಕೇಶ್ ಹತ್ಯೆ ಪ್ರಕರಣ ಸುಳಿವು ಇದೆ ಅಂತಾ ಮಾತ್ರ ಹೇಳಿದ್ದೆ. ಇಂತಾ ಪ್ರಕರಣದಲ್ಲಿ ಕಾಲಮಿತಿ ವಿಧಿಸುವುದು ಅಸಾಧ್ಯ. ಪ್ರಕರಣದ ಕುರಿತು ಮಾಹಿತಿಯನ್ನ ಸಾರ್ವಜನಿಕವಾಗಿ ಹೇಳುವಂತಿಲ್ಲ ಎಂದರು.

ಗೃಹ ಸಲಹೆಗಾರರ ಹಸ್ತಕ್ಷೇಪವಿಲ್ಲ…

ಗೃಹ ಇಲಾಖೆಗೆ ಕೆಂಪಯ್ಯ ಹಸ್ತಕ್ಷೇಪದ ಬಗ್ಗೆ ಕೇಳಿದ ಪ್ರಶ್ನೆಗೆ ಜಾಣ ಉತ್ತರ  ನೀಡಿದ ಸಚಿವ ರಾಮಲಿಂಗಾರೆಡ್ಡಿ, ಗೃಹ ಸಲಹೆಗಾರ ಕೆಂಪಯ್ಯರ  ಹಸ್ತಕ್ಷೇಪ ಎಂಬುದಿಲ್ಲ. ನಾನು ಬಂದ ಮೇಲೆ ಆ ರೀತಿ ಯಾವುದೂ ಆಗಿಲ್ಲ. ಅಗತ್ಯ ಬಿದ್ದಾಗ ನಾನು ಎಲ್ಲರಿಂದಲೂ ಸಲಹೆ ಪಡೆಯುತ್ತೇನೆ. ಮಾದ್ಯಮಗಳೂ ಕೂಡ ಸಂಪಾದಕೀಯ ಹಾಗೂ ಒಂದು ಗಂಟೆಗಳ ಚರ್ಚೆ ಮೂಲಕ ನಮಗೆ ಸಲಹೆ ಕೊಡುತ್ತೀರಿ. ನಾವು ಆ ಸಲಹೆಗಳನ್ನೂ ಗಮನಿಸುತ್ತೇವೆ ಎಂದು ತಿಳಿಸಿದರು.

ರಾಜೇಂದ್ರ ಕಠಾರಿಯಾಗೆ ಸಚಿವರಿಂದ ಒತ್ತಡ ವಿಚಾರ. ನಮ್ಮ ಇಲಾಖೆಯಲ್ಲಿ ಯಾರ ಮೇಲೂ ಒತ್ತಡ ಇಲ್ಲ. ಅದು ವೈಯಕ್ತಿಕ ವಿಚಾರಕ್ಕೆ ನಡೆದಿರುವುದು. ಒಂದು ಪ್ರಕರಣವನ್ನು ಸಾರ್ವತ್ರಿಕರಣ ಮಾಡುವುದು ಬೇಡ ಎಂದು ರಾಮಲಿಂಗರೆಡ್ಡಿ ತಿಳಿಸಿದರು.

Key words: investigation -Gauri Lankesh -murder case –progress- Home Minister Ramalinga Reddy.