ನಿಮ್ಗೂ ನೆಟ್’ವರ್ಕ್ ಸಮಸ್ಯೆ ನಾ…?! ದೇಶದ ಶೇ.56ರಷ್ಟು ಜನರಿಗೆ ಇಂಟರ್’ನೆಟ್ ಕನೆಕ್ಷನ್ ಪ್ರಾಬ್ಲಂ !

0
4048

ನವದೆಹಲಿ, ಆಗಸ್ಟ್ 02 (www.justkannada.in): ಭಾರತದಲ್ಲಿ ಕಳೆದ 8 ತಿಂಗಳಿನಿಂದ ಮೊಬೈಲ್ ಡಾಟಾ ಬಳಕೆ ಅತ್ಯಧಿಕವಾಗಿ ಬೆಳವಣಿಗೆಯಾಗಿದೆಯಾಗಿದೆ. ಇದರ ನಡುವೆ ಶೇ.56 ರಷ್ಟು ಜನ ದಿನಕ್ಕೆ ಒಮ್ಮೆಯಾದರೂ ಇಂಟರ್ ನೆಟ್ ಕನೆಕ್ಷನ್ ಸಮಸ್ಯೆ ಎದುರಿಸುತ್ತಿದ್ದಾರೆ!

ಈ ಬಗ್ಗೆ ಹೊಸ ವರದಿಯೊಂದು ಬೆಳಕು ಚೆಲ್ಲಿದೆ. ಟ್ರು ಬ್ಯಾಲೆನ್ಸ್ ಮೊಬೈಲ್ ಆಪ್ ತಯಾರಿಸಿರುವ ಈ ವರದಿಯ ಪ್ರಕಾರ, ಡಾಟಾ ಕನೆಕ್ಟಿವಿಟಿ ಗುಣಮಟ್ಟ ಇನ್ನೂ ಕಳಪೆಯಾಗಿಯೇ ಉಳಿದಿದ್ದು, ಮೊಬೈಲ್ ಹ್ಯಾಂಡ್ ಸೆಟ್ ಗಳು ಹೆಚ್ಚು ಇಂಟರ್ ನೆಟ್ ಕನೆಕ್ಟಿವಿಟಿ ಸಮಸ್ಯೆ ಎದುರಿಸಲು ಕಾರಣವಾಗುತ್ತಿದೆ ಎಂದು ತಿಳಿದುಬಂದಿದೆ.

ಭಾರತದಾದ್ಯಂತ ಅಲ್ಲಲ್ಲಿ ಮೊಬೈಲ್ ಇಂಟರ್ ನೆಟ್ ಸಂಪರ್ಕ ಕಡಿತಗೊಳ್ಳುವುದನ್ನು ಕಂಡುಬಂದಿದೆ. ಮೊಬೈಲ್ ಇಂಟರ್ ನೆಟ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆಯಾದರೂ ಶೇ.11 ರಷ್ಟು ಜನರು 24 ಗಂಟೆಗಳಿಗಿಂತಲೂ ಹೆಚ್ಚು ಕಾಲ ಆಫ್ ಲೈನ್ ನಲ್ಲಿಯೇ ಇರುತ್ತಾರೆ. ಶೇ.7 ರಷ್ಟು ಜನರು ಮಾತ್ರ 24 ಗಂಟೆ ಆನ್ ಲೈನ್ ಇರಲಿದ್ದು, 2017 ರ ಏಪ್ರಿಲ್ ವರೆಗೆ ಈ ಸಂಖ್ಯೆ ಶೇ.44 ಕ್ಕೇರಿದೆ.