ಮೈಸೂರಿನಲ್ಲಿ ಇಂದಿರಾ ಕ್ಯಾಂಟಿನ್ ಲೋಕಾರ್ಪಣೆ: ಉಪ್ಪಿಟ್ಟು ಕೇಸರಿಬಾತ್ ಸವಿದ ಸಿಎಂ ಸಿದ್ದರಾಮಯ್ಯ…

0
95
indira-cantin-launch-mysore-cm-siddaramaiah

ಮೈಸೂರು,ಜನವರಿ,12,2018(www.justkannada.in): ಬಡವರಿಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಇಂದಿರಾ ಕ್ಯಾಂಟಿನ್ ಯೋಜನೆ ಸಾಂಸ್ಕೃತಿಕ ನಗರಿಗೂ ವಿಸ್ತರಿಸಿದ್ದು, ಇಂದು ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಇಂದಿರಾ ಕ್ಯಾಂಟಿನ್ ಗೆ ಚಾಲನೆ ನೀಡಿದರು.

ಮೈಸೂರಿನ ಕಾಡಾ ಕಚೇರಿಯ ಅವರಣದಲ್ಲಿ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟಿನ್ ಲೋಕಾರ್ಪಣೆ ಮಾಡಿ ಅಲ್ಲಿ ಉಪ್ಪಿಟ್ಟು ಕೇಸರಿ ಬಾತ್ ಸವಿದರು. ನಗರದ 11 ಕಡೆಗಳಲ್ಲಿ ಇಂದಿರ ಕ್ಯಾಂಟಿನ್ ಸ್ಥಾಪಿಸಲಾಗಿದ್ದು ಇಂದಿನಿಂದ ಸಾರ್ವಜನಿಕರ ಬಳಕೆಗೆ ಲಭ್ಯವಾಗಿದೆ.

ಇಂದಿರಾ ಕ್ಯಾಂಟಿನ್ ಉದ್ಘಾಟನೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ, ಶಾಸಕರಾದ ವಾಸು, ಎಂ.ಕೆ ಸೋಮಶೇಖರ್ ಮೇಯರ್ ಎಂ.ಜೆ ರವಿಕುಮಾರ್, ಜಿ,.ಪಂ ಸದಸ್ಯೆ ಪುಷ್ಪಾ ಅಮರನಾಥ್ ಮತ್ತಿತರರು ಉಪಸ್ಥಿತರಿದ್ದರು.

ಬೆಳಿಗ್ಗೆ 5ರೂಗೆ ತಿಂಡಿ ಮಧ್ಯಾಹ್ನ ಮತ್ತು ರಾತ್ರಿ 10ರೂಗೆ ಊಟ ದೊರೆಯಲಿದೆ.

key words: Indira Cantin- launch – Mysore- CM Siddaramaiah