ಇಂದಿನಿಂದ ಭಾರತ- ಆಸೀಸ್ ಏಕದಿನ ಪಂದ್ಯ: ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ….

0
2450
India -won - toss - elected - bat -first.

ಚೆನ್ನೈ,ಸೆ,17,2017(www.justkannada.in): ಶ್ರೀಲಂಕಾ ವಿರುದ್ಧ ಟೆಸ್ಟ್, ಏಕದಿನ ಸರಣಿ ಮತ್ತು ಟಿ-20 ಸರಣಿಗಳನ್ನ ಗೆದ್ದು ವಿಶ್ವಾಸದಲ್ಲಿರುವ ಭಾರತದ ಕೊಹ್ಲಿ ಪಡೆ ಇದೀಗ ಕಾಂಗೂರುಗಳನ್ನ ಬಗ್ಗು ಬಡಿಯಲು ಸಜ್ಜಾಗಿದೆ.India -won - toss - elected - bat -first.

ಇಂದಿನಿಂದ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಏಕದಿನ ಸರಣಿ ಆಡಲಿದ್ದು, ಮೊದಲ ಪಂದ್ಯ ಚೆನ್ನೈನ ಪಿ.ಚಿಂದಬರಂ ಮೈದಾನದಲ್ಲಿ ನಡೆಯಲಿದೆ. ಇದೀಗ ಬಂದ ಮಾಹಿತಿ ಪ್ರಕಾರ ಟೀಂ ಇಂಡಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ.

ಉತ್ತಮ ಬ್ಯಾಟಿಂಗ್ ಪಡೆ ಹೊಂದಿರುವ ಟೀಂ ಇಂಡಿಯಾ ಆಸ್ಟ್ರೇಲಿಯಾ ಬೌಲರ್‌ಗಳನ್ನು ಮೈದಾನದಲ್ಲಿ ಕಾಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದ ಶಿಖರ್‌ ಧವನ್‌‌‌ ಮೊದಲ ಮೂರು ಏಕದಿನ ಪಂದ್ಯಗಳಿಂದ ಹೊರಬಿದ್ದಿರುವ ಕಾರಣ ಅವರ ಅನುಪಸ್ಥಿತಿ ತಂಡಕ್ಕೆ ಕಾಡಲಿದೆ. ಆದರೆ ಇವರ ಸ್ಥಾನವನ್ನು ಅಜಿಂಕ್ಯ ರಹಾನೆ ಅಥವಾ ಕನ್ನಡಿಗ ಕೆ ಎಲ್‌‌ ರಾಹುಲ್‌ ತುಂಬುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ

ಇನ್ನು ಶ್ರೀಲಂಕಾ ಪ್ರವಾಸದಲ್ಲಿದ್ದಂತೆ ಮಧ್ಯಮ ಕ್ರಮಾಂಕದಲ್ಲಿ ಮಹೇಂದ್ರ ಸಿಂಗ್‌‌ ಧೋನಿ, ಕೇದಾರ್‌‌ ಜಾಧವ್‌, ಹಾರ್ಧಿಕ್‌‌ ಪಾಂಡ್ಯಾ ತಂಡಕ್ಕೆ ಬೆನ್ನೆಲುಬಾಗಿ ನಿಲ್ಲಲಿದ್ದಾರೆ.

ಇನ್ನು ಬೌಲಿಂಗ್‌‌ ಕ್ಷೇತ್ರದಲ್ಲಿ ಟೀಂ ಇಂಡಿಯಾ ಬಲಿಷ್ಠವಾಗಿದ್ದು, ಭುವನೇಶ್ವರ್‌‌ ಕುಮಾರ್‌‌, ಉಮೇಶ್‌‌ ಯಾದವ್‌‌, ಜಸ್‌ಪ್ರೀತ್‌‌ ಬೂಮ್ರಾ ಹಾಗೂ ಮೊಹಮ್ಮದ್‌ ಶಮಿ ಅಸೀಸ್‌‌ ಮೇಲೆ ಅಸ್ತ್ರ ಪ್ರಯೋಗ ಮಾಡಲು ಸಜ್ಜಾಗಿದ್ದಾರೆ.

key words:India -won – toss – elected – bat -first.