ನವೆಂಬರ್‌ 16ರಿಂದ ಇಂಡೋ-ಲಂಕಾ ಕ್ರಿಕೆಟ್ ಸರಣಿ

0
1201

ನವದೆಹಲಿ, ಅಕ್ಟೋಬರ್ 04 (www.justkannada.in): ಶ್ರೀಲಂಕಾ ಮತ್ತು ಭಾರತ ಕ್ರಿಕೆಟ್ ತಂಡಗಳ ನಡುವೆ ಭಾರತದಲ್ಲಿ ನಡೆಯಲಿರುವ ಕ್ರಿಕೆಟ್ ಸರಣಿಯ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ ಪ್ರಕಟಿಸಿದೆ.

ನವೆಂಬರ್‌ 16ರಿಂದ ಡಿಸೆಂಬರ್ 24ರ ವರೆಗೆ ನಡೆಯಲಿರುವ ಸರಣಿಯಲ್ಲಿ ಉಭಯ ತಂಡಗಳು ಮೂರು ಟೆಸ್ಟ್‌, ಮೂರು ಏಕದಿನ ಹಾಗೂ ಮೂರು ಟಿ–20 ಪಂದ್ಯಗಳನ್ನಾಡಲಿವೆ. ನವೆಂಬರ್ 11ರಿಂದ 13ರ ವರೆಗೆ ಕೋಲ್ಕತ್ತದ ಈಡನ್‌ಗಾರ್ಡನ್ಸ್‌ನಲ್ಲಿ ಅಭ್ಯಾಸ ಪಂದ್ಯ ನಡೆಯಲಿದೆ. ನವೆಂಬರ್ 16ರಿಂದ 20ರ ವರೆಗೆ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ.

ಟೆಸ್ಟ್ ವೇಳಾಪಟ್ಟಿ
ಮೊದಲ ಟೆಸ್ಟ್ – ನವೆಂಬರ್ 16 – 20
ಎರಡನೇ ಟೆಸ್ಟ್ – ನವೆಂಬರ್ 24 – 28
ಮೂರನೇ ಟೆಸ್ಟ್ – ಡಿಸೆಂಬರ್ 2 – 6

ಏಕದಿನ ಕ್ರಿಕೆಟ್ ವೇಳಾಪಟ್ಟಿ
ದಿನಾಂಕ – ಸ್ಥಳ
ಡಿ. 10 – ಧರ್ಮಶಾಲಾ
ಡಿ. 13 – ಮೊಹಾಲಿ
ಡಿ. 17 – ವೈಜಾಗ್

ಟಿ–20 ವೇಳಾಪಟ್ಟಿ
ದಿನಾಂಕ – ಸ್ಥಳ
ಡಿ. 20 – ಕಟಕ್
ಡಿ. 22 – ಇಂದೋರ್
ಡಿ. 24 – ಮುಂಬೈ