ಲಂಡನ್,ಜೂ,15,2017(www.justkannada.in):  ಐಸಿಸಿ ಚಾಂಪಿಯನ್‌ ಟ್ರೋಫಿ ಟೂರ್ನಿಯ 2ನೇ ಸೆಮಿಫೈನಲ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ತಂಡ ಭಾರತ ಹಾಗೂ ಬಾಂಗ್ಲಾದೇಶ ಫೈಟ್ ನಡೆಸಲಿವೆ.India - Bangladesh -semifinal -Champions Trophy -today.

ಭಾರತ ತಂಡ ಬಾಂಗ್ಲಾದೇಶದ ವಿರುದ್ಧ ಗೆಲುವು  ಸಾಧಿಸಿ ಫೈನಲ್‌  ನಲ್ಲಿ ಪಾಕ್  ಮಣಿಸುವ ಮೂಲಕ ಮತ್ತೆ ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿಯಲು ಸಜ್ಜಾಗಿದೆ. ಆದರೆ ಬಾಂಗ್ಲಾ ವಿರುದ್ದ ಗೆಲುವು ಸಾಧಿಸುವುದು ಕೊಹ್ಲಿ ಪಡೆಗೆ ಅಷ್ಟೇನು ಸುಲಭವಲ್ಲ. ಬಲಿಷ್ಟ ತಂಡಗಳಿಗೆ ಶಾಕ್ ನೀಡುವ ಬಾಂಗ್ಲಾ ಈಗಾಗಲೇ ನ್ಯೂಜಿಲ್ಯಾಂಡ್ ಪ್ರಬಲ ತಂಡವನ್ನ ಸೋಲಿಸಿ ಸೆಮಿ ಫೈನಲ್ ಪ್ರವೇಶಿಸಿದೆ.

ಇಂದು ನಡೆಯಲಿರುವ ಸೆಮಿಫೈನಲ್ ನಲ್ಲಿ ಗೆದ್ದ ತಂಡ ಈಗಾಗಲೇ ಇಂಗ್ಲೇಂಡ್ ವಿರುದ್ದ ಜಯ ಸಾಧಿಸಿರುವ ಪಾಕ್ ಜತೆ  ಪೈನಲ್ ನಲ್ಲಿ ಸೆಣೆಸಲಿದೆ.

ನಾಕೌಟ್‌ ಹಂತದಲ್ಲಿ ಭಾರತ ಆಡಿರುವ ಮೂರು ಪಂದ್ಯಗಳಲ್ಲಿ ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿ, ಶ್ರೀಲಂಕಾ ವಿರುದ್ಧ ಸೋಲು ಕಂಡು ಬಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿ ಸೆಮೀಸ್‌ಗೆ ಲಗ್ಗೆ ಇಟ್ಟಿ ವಿಶ್ವಾಸದಲ್ಲಿದೆ. ಲಂಡನ್‌ನ ಎಜ್‌ಬಾಸ್ಟನ್‌ ಮೈದಾನದಲ್ಲಿ ಭಾರತೀಯ ಕಾಲಮಾನ ಮಧ್ಯಾಹ್ನ 3ಗಂಟೆಗೆ ಪಂದ್ಯ ಆರಂಭವಾಗಲಿದೆ.

ಇದಕ್ಕೂ ಮೊದಲು 2015ರ ಐಸಿಸಿ ವಿಶ್ವಕಪ್‌ ನ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತ-ಬಾಂಗ್ಲಾ ತಂಡ ಮುಖಾಮುಖಿಯಾಗಿದ್ದವು. ರೋಹಿತ್‌ ಶರ್ಮಾ ಅವರ ಶತಕದ ನೆರವಿನಿಂದ ಭಾರತ 109ರನ್‌ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಚಾಂಪಿಯನ್ಸ್‌‌ ಟ್ರೋಫಿಯ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾ ಭಾರತ ತಂಡಕ್ಕೆ ಸುಲಭ ತುತ್ತಾಗಿತ್ತು.

Key words: India – Bangladesh -semifinal -Champions Trophy -today.