ಮುಂಬೈ:ಮಾ-20:(www.justkannada.in)ರಿಲಾಯನ್ಸ್ ನ ಜಿಯೋ ಸಿಮ್ ಕ್ರಾಂತಿ ಬಳಿಕ ಟೆಲಿಕಾಮ್ ಮಾರುಕಟ್ಟೆಯಲ್ಲಿ ಹಲವಾರು ಸ್ಪರ್ಧೆ, ಬದಲಾವಣೆಗಳು ಕಂಡು ಬರುತ್ತಿದ್ದು, ವಡಾಫೋನ್ ಗ್ರೂಪ್ ನ ಭಾರತೀಯ ಘಟಕ ಹಾಗೂ ಐಡಿಯಾ ಜತೆ ವಿಲೀನ ಪ್ರಕ್ರಿಯೆ ಪೂರ್ಣಗೊಳಿಸಿದೆ. ಈ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಪ್ರತಿಸ್ಪರ್ಧಿಗಳೊಂದಿಗೆ ಹೊಸ ಸಮರಕ್ಕೆ ಮುಂದಾಗುವುದರೊಂದಿಗೆ ಮೊಬೈಲ್ ಲೋಕದಲ್ಲಿ ಮತ್ತೊಂದು ಕ್ರಾಂತಿಗೆ ಸಜ್ಜಾಗಿವೆ.

ವೋಡಾಫೋನ್ ಐಡಿಯಾ ಜತೆ ವೀಲಿನವಾಗುವುದರಿಂದ ಸುಮಾರು 40 ಕೋಟಿ ಬಳಕೆದಾರರು, 35% ಮಾರ್ಕೆಟ್ ಷೇರು ಹೊಂದಲಿದ್ದು, ಭಾರತದ ಅತ್ಯಂತ ದೊಡ್ಡ ಟೆಲಿಕಾಂ ನೆಟ್ ವರ್ಕ್ ಆಗಿ ಹೊರಹೊಮ್ಮಲಿದೆ.

ಈ ಕುರಿತು ಅಧಿಕೃತ ಘೋಷಣೆ ಮಾಡಿರುವ ಐಡಿಯಾ ಸೆಲ್ಯೂಲರ್ ಸಂಸ್ಥೆ, ತನ್ನ ಸಂಸ್ಥೆಯ ನಿರ್ದೇಶಕ ಮಂಡಳಿಯ ಸದಸ್ಯರು ವೋಡಾಫೋನ್ ವಿಲೀನಕ್ಕೆ ಸಮ್ಮತಿ ಸೂಚಿಸಿದ್ದು, ವಿಲೀನಗೊಳ್ಳಲಿದೆ ಎಂದು ಹೇಳಿದೆ. ಜಂಟಿ ಸಂಸ್ಥೆಯಲ್ಲಿ ವೋಡಾಫೋನ್ ಶೇ.45.1 ರಷ್ಟು ಪಾಲನ್ನು ಹೊಂದಿರಲಿದೆ. ನಂತರದ ದಿನಗಳಲ್ಲಿ ಪಾಲುದಾರಿಕೆಯನ್ನು ಸಮವಾಗಿಸಿಕೊಳ್ಳಲು ಹೆಚ್ಚಿನ ಷೇರುಗಳನ್ನು ಖರೀದಿಸುವ ಹಕ್ಕು ಹೊಂದಿದೆ ಎಂದು ಸಂಸ್ಥೆ ತಿಳಿಸಿದೆ.

Idea Cellular, Vodafone India, merge