ICC Ranking: ಎಬಿಡಿ ವಿಲಿಯರ್ಸ್’ಗೆ ಅಗ್ರಸ್ಥಾನ, 3ಕ್ಕೆ ಕುಸಿದ ವಿರಾಟ್ ಕೊಯ್ಲಿ

0
222

ದುಬೈ, ಮಾರ್ಚ್, 11(www.justkannada.in): ಅಂತಾರಾಷ್ಟ್ರೀಯ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಕೊಯ್ಲಿ ಮೂರನೇ ಸ್ಥಾನಕ್ಕೆ ಇಳಿದಿದ್ದು, ಡೇವಿಡ್ ವಾರ್ನರ್ ಹಿಂದಿಕ್ಕಿರುವ ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ ಅಗ್ರಸ್ಥಾನಕ್ಕೇರಿದ್ದಾರೆ.

ಇತ್ತೀಚೆಗಷ್ಟೇ ನ್ಯೂಜಿಲೆಂಡ್ ವಿರುದ್ಧ ಸರಣಿಯಲ್ಲಿ 262 ರನ್ ಗಳಿಸಿರುವ ಎಬಿಡಿ ಆಸೀಸ್ ನ ಡೇವಿಡ್ ವಾರ್ನರ್ ಅವರನ್ನು ಹಿಂದಿಕ್ಕಿ ಬ್ಯಾಟಿಂಗ್ ಶ್ರೇಯಾಂಕ್ ನಲ್ಲಿ ನಂಬರ್ ಒನ್ ಸ್ಥಾನಕ್ಕೆ ಜಿಗಿದಿದ್ದಾರೆ. ವಿಲಿಯರ್ಸ್ 875 ಅಂಕದೊಂದಿಗೆ ಅಗ್ರಸ್ಥಾನಕ್ಕೆ ಬಡ್ತಿ ಪಡೆದರೆ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ 871 ಅಂಕದೊಂದಿಗೆ ಕೇವಲ 4 ಪಾಯಿಂಟ್ಸ್ ಗಳಿಂದ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.

ಟೆಸ್ಟ್ ಶ್ರೇಯಾಂಕದಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿರುವ ವಿರಾಟ್ ಕೊಹ್ಲಿ, ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲೂ 852 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ನ ಜೋ ರೂಟ್ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಕೊನೆ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸಿದ್ದ ಇಂಗ್ಲೆಂಡ್ ನ ಜೋ ರೂಟ್ 787 ಅಂಕದೊಂದಿಗೆ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ದಕ್ಷಿಣ ಆಫ್ರಿಕಾದ ಡುಪ್ಲೆಸಿಸ್ ದಕ್ಷಿಣ ಆಫ್ರಿಕಾದ ಡುಪ್ಲೆಸಿಸ್ 781 ಅಂಕಗಳಿಸಿ ಐದನೇ, ದ.ಆಫ್ರಿಕಾದ ಡಿ ಕಾಕ್ 6ನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ನ ಮಾರ್ಟಿನ್ ಗುಫ್ತಿಲ್ ಇಂಗ್ಲೆಂಡ್ ನ ಮಾರ್ಟಿನ್ ಗುಫ್ತಿಲ್ ಎರಡು ಸ್ಥಾನ ಮೇಲಕ್ಕೇರಿದ್ದು 777 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್ ನ ಕೇನ್ ವಿಲಿಯಮ್ಸನ್ 758 ಅಂಕದೊಂದಿಗೆ 8ನೇ ಸ್ಥಾನದಲ್ಲಿದ್ದಾರೆ. ಪಾಕ್ ನ ಬಾಬರ್ ಅಝಮ್ 733 ಅಂಕ ಗಳಿಸಿ 9ನೇ ಸ್ಥಾನದಲ್ಲಿದ್ದರೆ, 10ನೇ ಸ್ಥಾನದಲ್ಲಿ ಆಸೀಸ್ ನ ಸ್ಟಿವ್ ಸ್ಮಿತ್ 733 ಅಂಕದೊಂದಿಗೆ ಇದ್ದಾರೆ.