ವಿಶ್ವಭೂಮಿ ದಿನಾಚಾರಣೆ ಅಂಗವಾಗಿ ನಾಳೆ ಹುಣಸೂರಿನಲ್ಲಿ ಸೀಡ್ ಬಾಲ್ ಹಸಿರು ಕ್ರಾಂತಿ ‘ಬನ್ನಿ ನಮ್ಮೂರನ್ನ ಹಸಿರಾಗಿಸೋಣ ‘ ಕಾರ್ಯಕ್ರಮ…

0
639
hunasur -Seed Ball Green Revolution -tomorrow -World Earth Day ...

ಮೈಸೂರು,ಏ,21,2017(www.justkannada.in): ವಿಶ್ವ ಭೂಮಿ ದಿನಾಚಾರಣೆ ಅಂಗವಾಗಿ ಗೋ ಗ್ರೀನ್ ಕ್ಲಬ್ , ಸ್ನೇಹಜೀವಿ ಸಂಸ್ಥೆ ಹುಣಸೂರು, ಅರಣ್ಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸೀಡ್ ಬಾಲ್ ಹಸಿರು ಕ್ರಾಂತಿ ‘ ಬನ್ನಿ ನಮ್ಮೂರನ್ನ ಆರಾಧಿಸೋಣ ಎಂಬ ಕಾರ್ಯಕ್ರಮವನ್ನ  ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಆಯೋಜಿಸಲಾಗಿದೆ. hunasur -Seed Ball Green Revolution -tomorrow -World Earth Day ...

ಹುಣಸೂರಿನ  ಉಪ ಅರಣ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ನಾಳೆ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಶಾಸಕರಾದ  ಎಚ್ ಪಿ ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಪರಿಸರ ತಜ್ಞರಾದ ಸುರೇಶ್  ಹೆಬ್ಳಿಕರ್  ಕಾರ್ಯಕ್ರಮವನ್ನ ಉದ್ಘಾಟಿಸಲಿದ್ದು, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ದೀಪಕ್ ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

Key words: hunasur -Seed Ball Green Revolution -tomorrow -World Earth Day …