ಸಿಹಿಯಾದ ಶಂಕರಪೋಳಿ ಮಾಡುವುದು ಸಖತ್ ಸಿಂಪಲ್!

0
1482

ಮೈದಾ ಹಿಟ್ಟಿನಲ್ಲಿ ಮೃದುವಾದ ಸಿಹಿ ಶಂಕರಪೋಳಿ ಮಾಡುವುದು ಬಹಳ ಸುಲಭ! ಸಿಹಿ ಶಂಕರಪೋಳಿ ಮಾಡುವ ವಿಧಾನ ಹೇಗೆ ಗೊತ್ತಾ ಮುಂದೆ ಓದಿ…

ಬೇಕಾಗುವ ಸಾಮಗ್ರಿಗಳು
1. ಮೈದಾ – 1/2 ಕಪ್
2. ಪುಡಿ ಸಕ್ಕರೆ – 1/4 ಕಪ್
3. ಡಾಲ್ಡಾ – 2 ಸ್ಪೂನ್
4. ಏಲಕ್ಕಿ ಪುಡಿ – ಸ್ವಲ್ಪ
5. ಎಣ್ಣೆ – ಕರಿಯಲು

ಮಾಡುವ ವಿಧಾನ: ಒಂದು ಬಾಣಲೆಯಲ್ಲಿ ಡಾಲ್ಡಾವನ್ನು ಕರಗಿಸಿ. ಇದಕ್ಕೆ ಪುಡಿ ಸಕ್ಕರೆ, ಮೈದಾ, ಏಲಕ್ಕಿ ಪುಡಿ ಹಾಕಿ ಹದವಾಗಿ ಹಿಟ್ಟನ್ನು ಕಲಸಿ, 5 ನಿಮಿಷದ ನಂತರ ಚಪಾತಿಯಂತೆ ಲಟ್ಟಿಸಿ, ಡೈಮಂಡ್ ಆಕಾರಕ್ಕೆ ಕತ್ತರಿಸಿ. ಕಾದ ಎಣ್ಣೆಯಲ್ಲಿ ಕರಿಯಿರಿ. ಆಮೇಲೆ ಪುಡಿ ಸಕ್ಕರೆಯನ್ನು ಮೇಲಿಂದ ಉದುರಿಸಿ.