ನಾಲಿಗೆ ಚಪ್ಪರಿಸುವ ‘ಮಶ್ರೂಮ್ ಪಲಾವ್’ ತಯಾರಿ ಹೇಗೆ

0
806

ಬೇಕಾಗುವ ಪದಾರ್ಥಗಳು:

* 1 ಕಪ್ ಅಕ್ಕಿ
* 1 ಕಪ್ ಅಣಬೆ
* 4 ಈರುಳ್ಳಿ (ಸಾಂಬಾರು ಈರುಳ್ಳಿ)
* 2 ಲವಂಗ
* 1/2 ಇಂಚಿನ ಚೆಕ್ಕೆ
* 2 ಏಲಕ್ಕಿ
* 1 ಪಲಾವ್ ಎಲೆ
* 1 ಚಮಚ ಗರಂ ಮಸಾಲ
* 1 ಚಮಚ ಜೀರಿಗೆ ಪುಡಿ
* ಸ್ವಲ್ಪ ಎಣ್ಣೆ
* ರುಚಿಗೆ ತಕ್ಕಷ್ಟು ಉಪ್ಪು

ಮಶ್ರೂಮ್ ಪಲಾವ್ ತಯಾರಿಸುವ ವಿಧಾನ:
* ಅಕ್ಕಿಯನ್ನು ಶುದ್ಧಗೊಳಿಸಿ ತೊಳೆಯಬೇಕು. ಬಿಸಿ ನೀರಿನಲ್ಲಿ 10 ನಿಮಿಷ ನೆನೆಸಬೇಕು. * ಸಾಂಬಾರು ಈರುಳ್ಳಿ ಸಣ್ಣಗೆ ಕತ್ತರಿಸಿ ಹಾಗೂ ಅದನ್ನು ಒಂದೆಡೆ ಇಟ್ಟುಕೊಳ್ಳಬೇಕು.
* ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿಕೊಳ್ಳಿ, ಎಣ್ಣೆ ಸರಿ ಬಿಸಿ ಆದ ನಂತರ ಅದರಲ್ಲಿ ಈರುಳ್ಳಿ, ಲವಂಗ, ಚೆಕ್ಕೆ, ಏಲಕ್ಕಿ ಮತ್ತು ಪಲಾವ್ ಎಲೆ, ಹಾಗೂ ಸಣ್ಣದಾಗಿ ತುಂಡು ಮಾಡಿರುವ ಮಶ್ರೂಮ್ ಅನ್ನು ಹಾಕಿ.
* ತದನಂತರ ಜೀರಿಗೆ ಪುಡಿ ಮತ್ತು ಗರಂ ಮಸಾಲಾ ಪುಡಿಯನ್ನು ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ.
* ನಂತರ ಅಕ್ಕಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ಎರಡು ಕಪ್ ಬಿಸಿ ನೀರನ್ನು ಅಕ್ಕಿ ಮಿಶ್ರಣಕ್ಕೆ ಹಾಕಿ ಈರುಳ್ಳಿಯ ಹಸಿರು ಭಾಗ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ತಿರುಗಿಸಬೇಕು. ಮುಚ್ಚುಳ ಮುಚ್ಚಿ ಬೇಯಿಸಿದರೆ ಮಶ್ರೂಮ್ ಪಲಾವ್ ತಿನ್ನಲು ರೆಡಿಯಾಗಿರುತ್ತೆ.