ಬೇಕಾಗುವ ಪದಾರ್ಥಗಳು
ಗೋಡಂಬಿ – 2 ಬಟ್ಟಲು
ಸಕ್ಕರೆ – 1 ಬಟ್ಟಲು
ಬಾದಾಮಿ – ಅರ್ಧ ಬಟ್ಟಲು
ಏಲಕ್ಕಿ – ಚಿಟಿಕೆಯಷ್ಟು
ತುಪ್ಪ – ಸ್ವಲ್ಪ
ಹಾಲು – 2 ಚಮಚ
ಕೇಸರಿ ದಳ- 2-3
ಲವಂಗ- 3

ಮಾಡುವ ವಿಧಾನ…
ಮೊದಲು ಗೋಡಂಬಿಯನ್ನು 30 ನಿಮಿಷಗಳ ಕಾಲ ನೀರಿನಲ್ಲಿ ನೆನೆಪಿಸಿಕೊಳ್ಳಬೇಕು. ನಂತರ ಚೆನ್ನಾಗಿ ತೊಳೆದು ನುಣ್ಣಗೆ ರುಬ್ಬಿಕೊಳ್ಳಬೇಕು.
ದಪ್ಪ ತಳದ ಪಾತ್ರೆಯಲ್ಲಿ ನೀರಿನೊಂದಿಗೆ ಸಕ್ಕರೆ, ಸ್ವಲ್ಪ ನೀರು ಹಾಕಿ ಪಾಕ ಮಾಡಿಕೊಂಡು ಅದಕ್ಕೆ ರುಬ್ಬಿಕೊಂಡ ಗೋಡಂಬಿಯನ್ನು ಹಾಕಿ ಹುರಿಯಬೇಕು.
ಬಳಿಕ ಸ್ವಲ್ಪ ಏಲಕ್ಕಿ ಪುಡಿ, ಕೇಸರಿಯನ್ನು 1 ಚಮಚ ನೀರಿನಲ್ಲಿ ಸೇರಿ ಚೆನ್ನಾಗಿ ಮಿಶ್ರಣ ಮಾಡಬೇಕು. ಬಳಿಕ ಸ್ವಲ್ಪ, ಸ್ವಲ್ಪವೇ ತುಪ್ಪ ಹಾಕಿ ಮಿಶ್ರಣ ಪಾತ್ರೆಯ ತಳ ಬಿಡುವವರೆಗೂ ಕೈಯಾಡಿಸುತ್ತಿರಬೇಕು. ನಂತರ ಕೆಳಗಿಳಿಸಿ ಆರಲು ಬಿಡಬೇಕು.
ಮತ್ತೊಂದೆಡೆ ಬಾದಾಮಿಯನ್ನು ಪುಡಿ ಮಾಡಿಕೊಂಡು ಸಕ್ಕರೆ ಪಾಕದಲ್ಲಿ ಹಾಕಿ ಹುರಿಯಬೇಕು. ಅದು ತಳ್ಳಬಿಡುತ್ತಿರಬೇಕಾದರೆ ತುಪ್ಪವನ್ನು ಹಾಕಿ ಆರಲು ಬಿಡಬೇಕು.
ನಂತರ ಗೋಡಂಬಿ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಲಟ್ಟಿಸಿಕೊಂಡು ಮಧ್ಯ ಭಾಗದಲ್ಲಿ ಬಾದಾಮಿ ಮಿಶ್ರಣವನ್ನು ಇಟ್ಟು ಆ್ಯಪಲ್ ಆಕಾರದಲ್ಲಿ ಉಂಡೆಯಂತೆ ಮಾಡಿ, ಮಧ್ಯಭಾಗದಲ್ಲಿ ಒಂದು ಲವಂಗ ಇಟ್ಟರೆ ರುಚಿಕರವಾದ ಕಾಜು ಆ್ಯಪಲ್ ಸವಿಯಲು ಸಿದ್ಧ.