ಬ್ರೆಡ್ ಆಮ್ಲೆಟ್ ಸ್ಯಾಂಡ್’ವಿಚ್ ಮಾಡೋದು ಹೀಗೆ….

0
1593

ಬೇಕಾಗುವ ಪದಾರ್ಥಗಳು…

ಬ್ರೆಡ್ – ಕತ್ತರಿಸಿದ್ದು 2
ದೊಡ್ಡ ದೊಟ್ಟೆ – 1
ಎಣ್ಣೆ – 1.5 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಅರಿಶಿನ ಪುಡಿ – ಚಿಟಿಕೆಯಷ್ಟು
ಕಾಳು ಮೆಣಸಿನ ಪುಡಿ – ಸ್ವಲ್ಪ
ಚಾಟ್ ಮಸಾಲಾ – 2 ಚಿಟಿಕೆ
ಈರುಳ್ಳಿ – ಕತ್ತರಿಸಿದ್ದು 1
ಕ್ಯಾಪ್ಸಿಕಂ – ಕತ್ತರಿಸಿದ್ದು 1
ಹಸಿ ಮೆಣಸಿನ ಕಾಯಿ – ಕತ್ತರಿಸಿದ್ದು 1
ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ….
*  ಮೊದಲು ಒಲೆಯ ಮೇಲೆ ಪ್ಯಾನ್ ವೊಂದನ್ನು ಇಟ್ಟು ಬ್ರೆಡ್ ಗಳನ್ನು ಎರಡೂ ಬದಿಯಲ್ಲಿ ಕೆಂಪಗೆ ಮಾಡಿಕೊಳ್ಳಬೇಕು.
ನಂತರ ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಮೊಟ್ಟೆಯನ್ನು ಹೊಡೆದು ಹಾಕಬೇಕು. ನಂತರ ಕತ್ತರಿಸಿಕೊಂಡ ಈರುಳ್ಳಿ, ಕ್ಯಾಪ್ಸಿಕಂ, ಹಸಿಮೆಣಸಿನ ಕಾಯಿ, ಚಾಟ್ ಮಸಾಲಾ, ಉಪ್ಪು, ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.

* ನಂತರ ಪ್ಯಾನ್ ಬಿಸಿ ಮಾಡಿಕೊಂಡು ಇದಕ್ಕೆ ಮಿಶ್ರಣ ಮಾಡಿಕೊಂಡ ಮೊಟ್ಟೆಯನ್ನು ಹಾರಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ನಂತರ ಇದನ್ನು ನಾಲ್ಕು ಭಾಗ ಕತ್ತರಿಸಿಕೊಳ್ಳಬೇಕು. ಈಗಾಗಲೇ ಕೆಂಪಗೆ ಮಾಡಿಟ್ಟುಕೊಂಡ ಬ್ರೆಡ್ ವೊಂದನ್ನು ತೆಗೆದುಕೊಂಡು ಇದರ ಮೇಲೆ ಬೇಯಿಸಿಕೊಂಡ ಮೊಟ್ಟೆ ಮಸಾಲೆಯೊಂದನ್ನು ಇಟ್ಟು ಇದರ ಮೇಲೆ ಸ್ವಲ್ಪ ಬೆಣ್ಣೆಯನ್ನು ಇಡಬೇಕು. ನಂತರ ಮತ್ತೊಂದು ಬ್ರೆಡ್ ತುಂಡನ್ನು ಇಟ್ಟು ತ್ರಿಕೋನ ಆಕಾರದಲ್ಲಿ ಕತ್ತರಿಸಿದರೆ ರುಚಿಕರ ವಾದ ಬ್ರೆಡ್ ಆಮ್ಲೆಟ್ ಸ್ಯಾಂಡ್’ವಿಚ್ ಸವಿಯಲು ಸಿದ್ಧ.