ಬೇಬಿ ಕಾರ್ನ್ ಕಬಾಬ್ ಮಾಡೋದು ಹೇಗೆ ಗೊತ್ತಾ…?

0
1405

ಹೊಸ ಬಗೆಯ ಬೇಬಿ ಕಾರ್ನ್ ಕಬಾಬ್ ಮಾಡುವುದು ಹೇಗೆ ಇಲ್ಲಿದೆ… ನೋಡಿ ಒಮ್ಮೆ ಟ್ರೈ ಮಾಡಿ ಟೇಸ್ಟ್ ಸೂಪರ್..!
ಬೇಕಾಗುವ ಸಾಮಗ್ರಿಗಳು
1. ಪಾ¯ಕ್ ಪೇಸ್ಟ್ – 1/4 ಕಪ್
2. ಬೇಯಿಸಿ ಮ್ಯಾಶ್ ಮಾಡಿದ ಅಮೆರಿಕನ್ ಕಾರ್ನ್ – 1/4 ಕಪ್
3. ಬೇಯಿಸಿ ಮ್ಯಾಶ್ ಮಾಡಿದ ಆಲೂಗಡ್ಡೆ – 2
4. ಸಣ್ಣಗೆ ಹೆಚ್ಚಿದ ಶುಂಠಿ – ಒಂದು ಚಮಚ
5. ಖಾರದ ಪುಡಿ – 1/2 ಚಮಚ
6. ಸಣ್ಣಗೆ ಹೆಚ್ಚಿದ ಹಸಿಮೆಣಸಿನ ಕಾಯಿ – 4 ಚಮಚ
7. ಗರಮ್ ಮಸಾಲ – 1/2 ಚಮಚ
8. ಬ್ರೆಡ್ ಪುಡಿ – 1 ಕಪ್
9. ಬೇಯಿಸಿದ ಬೇಬಿ ಕಾರ್ನ್ ಬೇಯಿಸಿದ್ದು – 4
10. ಎಣ್ಣೆ – ಕರಿಯಲು

ಮಾಡುವ ವಿಧಾನ: ಆಲೂ ಗಡ್ಡೆಯನ್ನು ಬೇಯಿಸಿ ಮ್ಯಾಶ್ ಮಾಡಿ. ಅದಕ್ಕೆ ಅಮೆರಿಕನ್ ಕಾರ್ನ್, ಪಾಲಾಕ್ ಪೇಸ್ಟ್, ಹೆಚ್ಚಿದ ಶುಂಠಿ, ಉಪ್ಪು, ಖಾರದ ಪುಡಿ, ಹೆಚ್ಚಿದ ಹಸಿಮೆಣಸಿನ ಕಾಯಿ, ಗರಮ್ ಮಸಾಲ, ಸ್ವಲ್ಪ ಬ್ರೆಡ್ ಪುಡಿಯನ್ನು ಹಾಕಿ ಚೆನ್ನಾಗಿ ಕಲಸಿ. ತಯಾರಾದ ಈ ಮಸಾಲೆಯನ್ನು ಪ್ರತಿತಿಯೊಂದು ಬೇಬಿ ಕಾರ್ನ್ ಗೂ ಪೂರ್ತಿಯಾಗಿ ಹಚ್ಚಿ. ಮಿಕ್ಕ ಬ್ರೆಡ್ ಪುಡಿಯಲ್ಲಿ ಇವನ್ನು ಹೊರಳಿಸಿ. ಕಾದ ಎಣ್ಣೆಯಲ್ಲಿ ಕರಿಯಿರಿ.