ಬೆಂಗಳೂರು,ಮಾ,20,2017(www.justkannada.in):  ಸದನದಲ್ಲಿ ಸಚಿವರು ಹಾಗೂ ಶಾಸಕರ ಗೈರಿಗೆ ಬಿಜೆಪಿ ಸದಸ್ಯರು ಆಕ್ರೋಶವ್ಯಕ್ತಪಡಿದ್ದು, ಬಿಜೆಪಿ ಆಕ್ರೋಶಕ್ಕೆ ಸ್ಪೀಕರ್ ಕೆಬಿ ಕೋಳಿವಾಡ ಧ್ವನಿಗೂಡಿಸಿದ್ದಾರೆ.

ಸದನದಲ್ಲಿ  ಸಚಿವರು ಶಾಸಕರು ಗೈರಾದ ಬಗ್ಗೆ ಗರಂ ಆದ ಸ್ಪೀಕರ ಕೋಳಿವಾಡ,   ಬಜೆಟ್ ಮೇಲಿನ ಚರ್ಚೆ ವೇಳೆ  ಎಲ್ಲಾ ಸಚಿವರು ಶಾಸಕರು ಉಪಸ್ಥಿತರಿರಬೇಕು ಎಂದು ಹಲವು ಬಾರಿ ಹೇಳಿದ್ದೇನೆ ಆದರೂ ಸಚಿವರು ಶಾಸಕರು ಕಲಾಪಕ್ಕೆ ಗೈರಾಗಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಇದೇ ವೇಳೆ ಗೈರಾಗಿರುವ ಸಚಿವರ ವಿರುದ್ದ ಕಿಡಿ ಕಾರಿದ ಬಿಜೆಪಿ ಶಾಸಕ ವಿಶ್ವೇಶ್ವರ ಹೆಗ್ಗಡೆ ಕಾಗೇರಿ, ಕಲಾಪದಲ್ಲಿ ಕೇವಲ ಇಬ್ಬರು ಸಚಿವರು ಮಾತ್ರ ಭಾಗಿಯಾಗಿದ್ದಾರೆ. ಯಾರೂ ಸಹ ಬಂದಿಲ್ಲ.ಅವರು ಎಲ್ಲಿ ಹೋದರು. ಅಂತಹ ಸಚಿವರಿಗೆ ಛೀಮಾರಿ ಹಾಕಿ ಎಂದು ಕಿಡಿ ಕಾರಿದರು.  ಈ ಸಮಯದಲ್ಲಿ ಸಚಿವರ ವಿರುದ್ದ ವ್ಯಂಗ್ಯವಾಡಿದ ಜೆಡಿಎಸ್ ಶಾಸಕ ಎಂಟಿ ಕೃಷ್ಣಪ್ಪ ರಾಜ್ಯದಲ್ಲೂ ಬರ,ಸದನದಲ್ಲಿ ಸಚಿವರಿಗೂ ಬರ ಎಂದರು.

Key words: House –ministers- BJP members –alleged- absentee-speaker kb  kolivada