ಕೆಪಿಎಲ್ ಟೂರ್ನಿಗೆ ಆಟಗಾರರ ಹರಾಜು ಪ್ರಕ್ರಿಯೆ ಆರಂಭ; ಮೈಸೂರು ವಾರಿಯರ್ಸ್ ತಂಡದ ಪಾಲಾದ ಕರುಣ್ ನಾಯರ್…

0
1748

ಬೆಂಗಳೂರು:ಆ-6:(www.justkannada.in) ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಗೆ ಇಂದು ಆಟಗಾರರ ಹರಾಜು ಪ್ರಕ್ರಿಯೆ ಆರಂಭವಾಗಿದೆ.  ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಹರಾಜಿಗೆ ಲಭ್ಯವಿರುವ ಒಟ್ಟು 215 ಆಟಗಾರರನ್ನು ಫೂಲ್ ಎ ಹಾಗೂ ಫೂಲ್ ಬಿ ಎಂಬುದಾಗಿ ವಿಂಗಡಿಸಲಾಗಿದೆ.

ಕೆ ಎಲ್ ರಾಹುಲ್, ಆರ್ ವಿನಯ್ ಕುಮಾರ್, ಮನೀಶ್ ಪಾಂಡೆ, ಕರುಣ್ ನಾಯರ್, ಸ್ಟುವರ್ಟ್ ಬಿನ್ನಿ, ಅಭಿಮನ್ಯು ಮಿಥುನ್, ಎಸ್ ಅರವಿಂದ್, ಆರ್ ಸಮರ್ಥ್, ಮಯಾಂಕ್ ಅಗರ್ವಾಲ್, ಶ್ರೇಯಸ್ ಗೋಪಾಲ್, ಜೆ ಸುಚಿತ್ ಸಹಿತ ಪ್ರಮುಖ 35 ಆಟಗಾರರು ಫೂಲ್ ಎ ನಲ್ಲಿದ್ದಾರೆ.

ಫೂಲ್ ಎ ಆಟಗಾರರಿಗೆ ಕನಿಷ್ಠ 50 ಸಾವಿರ ರೂ ಹಾಗೂ ಫೂಲ್ ಬಿ ಅಟಗಾರರಿಗೆ ಕನಿಷ್ಠ 20 ಸಾವಿರ ರೂ ಮೂಲ ಬೆಲೆ ನಿಗದಿ ಮಾಡಲಾಗಿದೆ. ಫೂಲ್ ಎ ನಿಂದ 7 ಫ್ರಾಂಚೈಸಿಗಳು ತಲಾ ಗರಿಷ್ಜ್ಠ ಐವರು ಹಾಗೂ ಕನಿಷ್ಠ ಇಬ್ಬರು ಆಟಗಾರರನ್ನು ಖರೀದಿಸಬೇಕಿದೆ. ಹರಾಜಿಗೆ ಒಟ್ಟು 30 ಲಕ್ಷ ರೂಗಳನ್ನು ನಿಗದಿ ಪಡಿಸಲಾಗಿದ್ದು, ಫೂಲ್ ಎ ಆಟಗಾರರಿಗೆ ಗರಿಷ್ಠ 18 ಲಕ್ಷ ಹಾಗೂ ಫೂಲ್ ಬಿ ಆಟಗಾರರಿಗೆ ಗರಿಷ್ಠ 12 ಲಕ್ಷರೂ ಗಳನ್ನು ಫ್ರಾಂಚೈಸಿಗಳು ವಿನಿಯೋಗಿಸಬಹುದಾಗಿದೆ. ಈ ಬಾರಿ ಯಾವ ಫ್ರಾಂಚೈಸಿಗಳಿಗೂ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡದೇ ಎಲ್ಲರನ್ನೂ ಹರಾಜಿಗಿಟ್ಟಿರುವುದು ವಿಶೇಷ.

ಸದ್ಯದ ಮಾಹಿತಿ ಪ್ರಕಾರ ಈ ಕೆಳಕಂಡ  ಆಟಗಾರರು ಯಾವ ಟೀಮ್ ಸೇರಿದ್ದಾರೆ ಇಲ್ಲಿದೆ ಮಾಹಿತಿ ನೋಡಿ..

ಬೆಂಗಳೂರು ಬ್ಲಾಸ್ಟರ್ಸ್ ತಂಡಕ್ಕೆ ಪವನ್ ದೇಶಪಾಂಡೆ ಸೇರ್ಪಡೆ (4.6 ಲಕ್ಷ ರು)

* ಪ್ರತೀಕ್ ಜೈನ್ ಗೆ 5.5 ಲಕ್ಷ ರು ನೀಡಿ ಖರೀದಿಸಿದ ಬೆಳಗಾವಿ ಪ್ಯಾಂಥರ್ಸ್

* ಬೆಳಗಾವಿ ಪ್ಯಾಂಥರ್ಸ್ ತಂಡ ಸೇರಿದ ಮನೀಶ್ ಪಾಂಡೆ (1.6 ಲಕ್ಷ ರು)

* ಹುಬ್ಳಿ ಟೈಗರ್ಸ್ ಪಾಲಾದ ಮಾಯಾಂಕ್ ಅಗರವಾಲ್ (7 ಲಕ್ಷ ರು)

* ಮೈಸೂರು ವಾರಿಯರ್ಸ್ ಪಾಲಾದ ಕರುಣ್ ನಾಯರ್ (4 ಲಕ್ಷ ರು)

* ಗೌತಮ್ ಸಿ.ಎಂ 50 ಸಾವಿರ ರುಪಾಯಿಗೆ ಖರೀದಿಸಿದ ಬಳ್ಳಾರಿ ಟಸ್ಕರ್ಸ್

* ಡೇವಿಡ್ ಮಥಾಯಿಸ್ (ಯಾರೂ ಖರೀದಿಸಿಲ್ಲ)

* ಬೆಂಗಳೂರು ಬ್ಲಾಸ್ಟರ್ಸ್ ಪಾಲಾದ ಆರ್ ಸಮರ್ಥ್ (5.9 ಲಕ್ಷರು)

*ಗೌತಮ್ ಕೆಗೆ 7.2 ಲಕ್ಷ ರು ಕೊಟ್ಟು ಖರೀದಿಸಿದ ಬೆಳಾಗಾವಿ ಪ್ಯಾಂಥರ್ಸ್

* ಬಿಜಾಪುರ್ ಬುಲ್ಸ್ ಗೆ 1.30 ಲಕ್ಷ ರು ಗೆ ರೋಹಿತ್ ಮೋರೆ ಖರೀದಿ

* 7.20 ಲಕ್ಷ ರುಗೆ ಬಳ್ಳಾರಿ ಟಸ್ಕರ್ಸ್ ಪಾಲಾದ ಅಮಿತ್ ವರ್ಮಾ

* ಅನಿರುಧ್ ಜೋಶಿಯನ್ನು 5.8 ಲಕ್ಷ ರುಗೆ ಖರೀದಿಸಿದ ನಮ್ಮ ಶಿವಮೊಗ್ಗ

* ಕೆಎಲ್ ರಾಹುಲ್ ಅವರನ್ನು 50 ಸಾವಿರ ರುಪಾಯಿಗೆ ಖರೀದಿಸಿದ ಬಳ್ಳಾರಿ ಟಸ್ಕರ್ಸ್.

* ಪವನ್ ಕೆಬಿ ಅವರನ್ನು 3 ಲಕ್ಷ ರುಪಾಯಿಗೆ ಖರೀದಿಸಿದ ಬಳ್ಳಾರಿ ಟಸ್ಕರ್ಸ್.

* ಮೀರ್ ಕುರಿಯನ್ ಅಬ್ಬಾಸ್ ರನ್ನು 2.6 ಲಕ್ಷ ರುಗೆ ಖರೀದಿಸಿದ ಬೆಳಗಾವಿ ಪ್ಯಾಂಥರ್ಸ್.

HOT BIDDING,KARNATAKA PREMIER LEAGUE, AUCTION
Although the likes of KL Rahul, Karun Nair and Manish Pandey are up for grabs at the Karnataka Premier League (KPL) auction, youngsters such as Abhishek Reddy, Vyshak Vijaykumar, Prasidh Krishna and Pradeep T are likely to be much in demand by the seven franchises on Sunday.