ಬೆಂಗಳೂರು: ಎಲ್ಲಾ ಫ್ಲೈಒವರ್ ಗಳ ಎತ್ತರ, ಇಳಿಜಾರಿನ ಬಗ್ಗೆ ಮಾಹಿತಿ ನೀಡುವಂತೆ ಹೈಕೋರ್ಟ್ ಸೂಚನೆ

0
160

ಬೆಂಗಳೂರು:ಡಿ-7:(www.justkannada.in) ಬೆಂಗಳೂರು ನಗರದಲ್ಲಿನ ಎಲ್ಲಾ ಫ್ಲೈಒವರ್ ಗಳ ಎತ್ತರ ಹಾಗೂ ಇಳಿಜಾರಿನ ಕುರಿತ ಸಂಪೂರ್ಣ ಮಾಹಿತಿ ನೀಡುವಂತೆ ಹೈಕೋರ್ಟ್‌, ಬಿಬಿಎಂಪಿಗೆ ಸೂಚನೆ ನೀಡಿದೆ.

ಶಿವಾನಂದ ವೃತ್ತದ ಬಳಿ ನಿರ್ಮಾಣವಾಗುತ್ತಿರುವ ಉಕ್ಕಿನ ಮೇಲುರಸ್ತೆ ನಿರ್ಮಾಣಕ್ಕೆ ತಡೆ ನೀಡುವಂತೆ ಕೋರಿ ಕುಮಾರಪಾರ್ಕ್‌ ಪೂರ್ವ ಭಾಗದ ನಿವಾಸಿ ಬಿ.ಪಿ.ಮಹೇಶ್‌ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್‌.ಜಿ.ರಮೇಶ್‌ ಹಾಗೂ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್‌ ಕುಮಾರ್‌ ಅವರಿದ್ದ ಪೀಠ, ಬಿಬಿಎಂಪಿ ವಕೀಲರಿಗೆ ಸೋಮವಾರದೊಳಗೆ ಪ್ರಮಾಣಪತ್ರದ ಮೂಲಕ ವಿವರ ನೀಡಿ ಎಂದು ಸೂಚನೆ ನೀಡಿದೆ.

ಮೇಲು ಸೇತುವೆ ಎತ್ತರದ ಬಗ್ಗೆ ತಕರಾರು ಇದೆ, ಹಾಗಾಗಿ ಪಾಲಿಕೆ ಈಗಾಗಲೇ ಬೆಂಗಳೂರಿನಲ್ಲಿ ಇರುವ ಮೇಲು ಸೇತುವೆಗಳ ಎತ್ತರ ಹಾಗೂ ಇಳಿಜಾರಿನ ಕುರಿತು ಮಾಹಿತಿ ಸಲ್ಲಿಸಬೇಕು”ಎಂದು ನ್ಯಾಯಪೀಠ ಸೂಚಿಸಿತು.

ಅರ್ಜಿದಾರರ ಪರ ವಕೀಲರು ಭಾರತೀಯ ರಸ್ತೆ ಕಾಂಗ್ರೆಸ್‌ (ಐಆರ್‌ಸಿ)ನಿಯಮಗಳ ಪ್ರಕಾರ ಸೇತುವೆ 5.5 ಮೀಟರ್‌ ಎತ್ತರವಿರಬೇಕು.ಆದರೆ ಶಿವಾನಂದ ವೃತ್ತದ ಬಳಿ ನಿರ್ಮಿಸುತ್ತಿರುವ ಮೇಲ್ಸೇತುವೆ 4.5 ಮೀಟರ್‌ ಎತ್ತರವಿದ್ದು,ಐಆರ್‌ಸಿ ನಿಯಮಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.
High Court order,flyovers,details,Bangalore city
The High Court has instructed the BBMP to provide full information on the height and slope of all the flyovers in Bangalore city.