ಮಾರ್ನಿಂಗ್ ಬ್ರೇಕ್ ಫಾಸ್ಟ್’ಗೆ ಫ್ರೆಂಚ್ ಟೋಸ್ಟ್ ಮಾಡಿ!

0
1289

2 ನಿಮಿಷಗಳಲ್ಲಿ ಫ್ರೆಂಚ್ ಟೋಸ್ಟ್ ಮಾಡುವ ರೆಸಿಪಿ ಇಲ್ಲಿದೆ. ಮೊಟ್ಟೆ, ಹಾಲು ಹಾಗೂ ಬ್ರೆಡ್‌ ಇದ್ದರೆ ಸಾಕು! 2 ನಿಮಿಷಗಳಲ್ಲಿ ಫ್ರೆಂಚ್ ಟೋಸ್ಟ್ ಮಾಡಬಹುದು.

ಸಾಮಗ್ರಿಗಳು
1. ಹಾಲು – 1/2 ಕಪ್
2. ಪುಡಿ ಸಕ್ಕರೆ – 1/4 ಕಪ್
3. ಮೊಟ್ಟೆ – 2
4. ಬ್ರೆಡ್ ಸ್ಲೈಸ್ – 4
5. ತುಪ್ಪ – 1ಸ್ಪೂನ್

ಮಾಡುವ ವಿಧಾನ: ಮೊಟ್ಟೆಯನ್ನು ಒಂದು ಬೌಲ್ ಬಲ್ಲಿ ಹಾಕಿ ಚೆನ್ನಾಗಿ ಬೀಟ್ ಮಾಡಿಕೊಳ್ಳಿ. ಇದಕ್ಕೆ ಹಾಲು ಹಾಗೂ ಸಕ್ಕರೆ ಸೇರಿಸಿ ಚೆನ್ನಾಗಿ ಕಲಸಿ. ಇದರಲ್ಲಿ ಬ್ರೆಡ್ ಸ್ಲೈಸ್ ಗಳನ್ನು ಅದ್ದಿ, ತವಾದ ಮೇಲೆ ತುಪ್ಪ ಹಾಕಿ ಟೋಸ್ಟ್ ಮಾಡಿಕೊಳ್ಳಿ.