ಹಾಸನದ ಅಧಿದೇವತೆ  ಐತಿಹಾಸಿಕ ಹಾಸನಾಂಬೆ ದರ್ಶನ ಆರಂಭ: ಗರ್ಭಗುಡಿ ಬಾಗಿಲು ತೆರೆದ ಜಿಲ್ಲಾಡಳಿತ…

0
516
hassan-goddess-historic-hassanambay-darshan

ಹಾಸನ,ಅ,12,2017(www.justkannada.in): ವರ್ಷಕೊಮ್ಮೆ ಮಾತ್ರ ಬಾಗಿಲು ತೆರೆಯುವ ಐತಿಹಾಸಿಕ ಹಾಸನಾಂಬೆಯ ಗರ್ಭಗುಡಿಯ ಬಾಗಿಲು ಇಂದು ತೆರೆಯಲಾಗಿದ್ದು, ಭಕ್ತರು 9 ದಿನಗಳಲ್ಲಿ ಹಾಸನಾಂಬೆಯ ದರ್ಶನ ಪಡೆಯಬಹುದಾಗಿದೆ.hassan-goddess-historic-hassanambay-darshan

ಹಿಂದೂ ಪಂಚಾಂಗದ ಆಶ್ವೀಜ ಮಾಸದ ಹುಣ್ಣಿಮೆ ನಂತರದ ಮೊದಲ ಗುರುವಾರ ಬಾಗಿಲು ತೆಗೆಯುವುದು ಹಿಂದಿನಿಂದ ಬಂದಿರುವ ಸಂಪ್ರದಾಯ. ಅದೇ ರೀತಿ ಮೈಸೂರು ತಳವಾರ ವಂಶಸ್ಥ  ನಂಜರಾಜ ಅರಸು ಅವರಿಂದ  ಬನ್ನಿ ಕತ್ತರಿಸುವ ಮೂಲಕ ಬಾಗಿಲು ತೆಗೆಯಲಾಯಿತು.

ಸುಮಾರು ಇಂದು ಮಧ್ಯಾಹ್ನ 12.33ರ ವೇಳೆಗೆ ಜಿಲ್ಲಾಡಳಿತ ಬಾಗಿಲು ತೆರೆದಿದ್ದು, ಜಿಲ್ಲಾಧಿಕಾರಿ  ರೋಹಿಣಿ ಸಿಂದೂರಿ ತಾಯಿ ಹಾಸನಾಂಬೆಯ ದರ್ಶನ ಪಡೆದರು. ತಳವಾರ ವಂಶಸ್ಥರಿಂದ ಧಾರ್ಮಿಕ ಪೂಜೆ ಸಲ್ಲಿಸಲಾಯಿತು.

ಇಂದಿನಿಂದ ಬಲಿ ಪಾಡ್ಯಮಿಯ ಮಾರನೆ ದಿನದವರೆಗೆ ಸಾರ್ವಜನಿಕರಿಗೆ  ದರ್ಶನ ಭಾಗ್ಯ ಲಭಿಸಲಿದ್ದು, ಲಕ್ಷಾಂತರ ಮಂದಿ ದರ್ಶನ ಪಡೆಯುವ ನಿರೀಕ್ಷೆ ಇದೆ. ಇಂದಿನಿಂದ ಅಕ್ಟೋಬರ್ 21ರವರೆಗೆ ಹಾಸನಾಂಬೆಯ ಭಕ್ತರಿಗೆ ದರ್ಶನ ನೀಡಲಿದ್ದಾಳೆ. ಆದರೆ ಇಂದು ಮತ್ತು ಕೊನೆಯ ದಿನ ಸಾರ್ವಜನಿಕರಿಗೆ ದರ್ಶನದ ವ್ಯವಸ್ಥೆ ಇರುವುದಿಲ್ಲ. ಈ ಬಾರೀ ದಿನದ 24ಗಂಟೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು ಬಾಗಿಲು ತೆಗೆದ ನಂತರ ಅಲಂಕಾರ ನೈವೇದ್ಯ ಸೇರಿದಂತೆ ವಿವಿಧ ಕಾರ್ಯಗಳು ನೆರವೇರಲಿದ್ದು, ನಾಳೆ ಬೆಳಿಗ್ಗೆ 5 ಗಂಟೆಯಿಂದ ಹಾಸನಾಂಬೆಯ ಸಾರ್ವಜನಿಕ ದರ್ಶನ ಲಭ್ಯವಾಗಲಿದೆ.

Key words: Hassan- Goddess –historic- Hassanambay darshan