ಕನ್ನಡ ಉಪನ್ಯಾಸಕರ ಹುದ್ದೆ ಅರ್ಜಿ ಆಹ್ವಾನ

0
3918

gkಮೈಸೂರು:ಡಿ-2:(www.justkannada.in)ಕುವೆಂಪುನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಫ್.ಡಿ.ಪಿ. ನಿಯೋಜನೆಗೊಂಡ ಉಪನ್ಯಾಸಕರ ಬದಲಿಗೆ 2 ವರ್ಷಗಳ ಕಾಲ ತಾತ್ಕಾಲಿಕವಾಗಿ ಬೋಧಿಸಲು ಕನ್ನಡ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಯು ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್.ಇ.ಟಿ), ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆ (ಎಸ್.ಎಲ್.ಇ.ಟಿ) ಹಾಗೂ ಪಿ.ಹೆಚ್.ಡಿ ಪದವಿ (ಕೋರ್ಸ್‍ವರ್ಕ್ ಸಹಿತ) ಪಡೆದವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಆಸಕ್ತರು ಡಿಸೆಂಬರ್ 10 ರೊಳಗಾಗಿ ಸ್ವವಿವರವುಳ್ಳ ಅರ್ಜಿ ಹಾಗೂ ದೃಢೀಕೃತ ಶೈಕ್ಷಣಿಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2567906 ನ್ನು ಸಂಪರ್ಕಿಸುವುದು.

government first grade college mysore, kuvempunagar