ಪೂನಂ ಪಾಂಡೆ ಆ್ಯಪ್’ಗೆ ಗೂಗಲ್ ರೆಡ್ ಸಿಗ್ನಲ್!

0
574

ಮುಂಬೈ, ಏಪ್ರಿಲ್ 20 (www.justkannada.in): ಕೆಲವು ದಿನಗಳ ಹಿಂದಷ್ಟೇ ಲಾಂಚ್ ಆಗಿದ್ದ ಬಾಲಿವುಡ್ ನಟಿ ಪೂನಂ ಪಾಂಡೆ ಅವರ ಆ್ಯಪ್​ಗೆ ಗೂಗಲ್ ನಿಷೇಧ ಹೇರಿದೆ!

ನಾನು ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪ್ ಸ್ಟೋರ್​ನಲ್ಲಿ ಹಲವಾರು ವಯಸ್ಕರ ಪತ್ರಿಕೆಗಳನ್ನು ನೋಡಿದ್ದೇನೆ ಮತ್ತು ಆ್ಯಪ್​ಗಳನ್ನು ನೋಡಿದ್ದೇನೆ. ಆದರೂ ಗೂಗಲ್ ನನ್ನ ಆ್ಯಪ್ ಅನ್ನು ನಿಷೇಧಿಸಿದೆ ಎಂದು ಪೂನಂ ಪಾಂಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನನ್ನ ಆ್ಯಪ್ ಗೂಗಲ್ ಪ್ಲೇಸ್ಟೋರ್​ಗೆ ಅಪ್​ಲೋಡ್ ಆದ ಕೆಲವೇ ನಿಮಿಷಗಳಲ್ಲಿ 15 ಸಾವಿರಕ್ಕೂ ಹೆಚ್ಚು ಜನರು ಡೌನ್​ಲೋಡ್ ಮಾಡಿಕೊಂಡಿದ್ದರು. ಈ ಸಮಸ್ಯೆಯನ್ನು ಆದಷ್ಟು ಶೀಘ್ರ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಪೂನಂ ಪಾಂಡೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಗೂಗಲ್ ನನ್ನ ಆ್ಯಪ್ ಅನ್ನು ನಿಷೇಧಿಸಿರಬಹುದು ಆದರೆ ಆಂಡ್ರಾಯ್ಡ್ ಬಳಕೆದಾರರು ನನ್ನ ಅಪ್ಲಿಕೇಶನ್ ಅನ್ನು ನೇರವಾಗಿ ಡೌನ್​ಲೋಡ್ ಮಾಡಿಕೊಳ್ಳಬಹುದು ಎಂದು ಪೂನಂ ಟ್ವಿಟ್ ಮಾಡಿದ್ದಾರೆ.