ಮುಂಬೈ, ಜನವರಿ 08 (www.justkannada.in): ವೆಬ್ ಸೈಟ್ ಗಳಲ್ಲಿನ ಸ್ವಯಂಚಾಲಿತ ವಿಡಿಯೋಗಳಿಂದ ಉಂಟಾಗುವ ಕಿರಿಕಿರಿಗೆ ಗೂಗಲ್ ಕ್ರೋಮ್ ಅಂತ್ಯ ಹಾಡಲು ಕ್ರಮ ಕೈಗೊಂಡಿದ್ದು, ಹೊಸ ಆವೃತ್ತಿಯಲ್ಲಿ ಸ್ವಯಂಚಾಲಿತ ವಿಡಿಯೋಗಳನ್ನು ಮ್ಯೂಟ್ ಮಾಡುವ ಆಯ್ಕೆಯನ್ನು ನೀಡಿದೆ.

ವಿಂಡೋಸ್, ಮ್ಯಾಕ್, ಲಿನೆಕ್ಸ್ ನಲ್ಲಿ ಈ ಆಯ್ಕೆ ಲಭ್ಯವಿದ್ದು, ಕ್ರೋಮ್ 64 ರಲ್ಲಿ ಶಾಶ್ವತವಾಗಿ ಸ್ವಯಂಚಾಲಿತ ವಿಡಿಯೋಗಳನ್ನು ಮ್ಯೂಟ್ ಮಾಡುವ ಆಯ್ಕೆ ಲಭ್ಯವಿರುವುದರ ಬಗ್ಗೆ ಇಂಡಿಪೆಂಡೆಂಟ್ ವರದಿ ಪ್ರಕಟಿಸಿದೆ. ಬಳಕೆದಾರರು “ವ್ಯೂ ಸೈಟ್ ಇನ್ಫೋರ್ಮೇಷನ್ ನಲ್ಲಿ ಆಮ್ನಿಬಾರ್ ನ್ನು ಆಯ್ಕೆ ಮಾಡುವ ಮೂಲಕ ವಿಡಿಯೋಗಳನ್ನು ಮ್ಯೂಟ್ ಮಾಡಬಹುದಾಗಿದೆ.

ಈ ಹಿಂದೆಯೂ ಗೂಗಲ್ ಕ್ರೋಮ್ ನಲ್ಲಿ ವಿಡಿಯೋಗಳನ್ನು ತಾತ್ಕಾಲಿಕವಾಗಿ ಮ್ಯೂಟ್ ಮಾಡುವ ಆಯ್ಕೆ ಲಭ್ಯವಿತ್ತು. ಇದೇ ವೇಳೆ ಹೆಚ್ ಡಿ ಆರ್ ಇಮೇಜಿಂಗ್ ಸಪೋರ್ಟ್ ಆಯ್ಕೆಯನ್ನೂ ಗೂಗಲ್ ಕ್ರೋಮ್ ಹೊಸ ಆವೃತ್ತಿಯಲ್ಲಿ ನೀಡಿದೆ.