ಸೆಕ್ಸ್ ಸಮಸ್ಯೆಗೆ ಸ್ನೇಹಿತರ ಸಲಹೆ ಪರಿಹಾರವಲ್ಲ !

0
1309

ಲೈಂಗಿಕ ತಜ್ಞರೊಂದಿಗೆ ಪ್ರಶ್ನೋತ್ತರ

ಪ್ರಶ್ನೆ 1: ನನಗೆ 46 ವರ್ಷ. ಯಾವುದೇ ಕಾಯಿಲೆಗಳಿಂದ ಬಳಲುತ್ತಿಲ್ಲ. ಇತ್ತೀಚೆಗೆ ನನಗೆ ಶೀಘ್ರಸ್ಖಲನವಾಗುತ್ತಿದೆ. ಲೈಂಗಿಕ ಕ್ರಿಯೆಗಿಂತ 10 ನಿಮಿಷ ಮುಂಕೇಳಿಯಾಡುತ್ತೇನೆ. ನನ್ನ ಪತ್ನಿಯನ್ನು ಸ್ಪರ್ಶ ಮತ್ತು ಮುಂಕೇಳಿಯಿಂದ ತೃಪ್ತಿಪಡಿಸುತ್ತೇನೆ. ಆದರೆ ಲೈಂಗಿಕ ಕ್ರಿಯೆ ಶುರು ಮಾಡಿದ 2 ನಿಮಿಷಕ್ಕೆ ಸ್ಖಲನವಾಗುತ್ತದೆ. 2004ರಲ್ಲಿ ನನಗೆ ವ್ಯಾಸೆಕ್ಟಮಿ ಮಾಡಿಕೊಂಡೆ. ಶೀಘ್ರ ಸ್ಖಲನ ತಡೆಯಲು ಯಾವುದಾದರೂ ಮಾತ್ರೆಗಳಿವೆಯೇ ?

ವೈದ್ಯರ ಉತ್ತರ: ನಿಮ್ಮ ಆರೋಗ್ಯದ ಕುರಿತು ನಿಮ್ಮ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ. ನಿಮ್ಮ ಸಮಸ್ಯೆ ಪರಿಹಾರಕ್ಕೆ ಔಷಧಿಗಳಿವೆ. Confido ಮಾತ್ರೆಯನ್ನು ಊಟಕ್ಕೆ ಮುಂಚೆ ಬೆಳಗ್ಗೆ ಮತ್ತು ಸಂಜೆ ಐದು ವಾರ ತೆಗೆದುಕೊಳ್ಳಿ. ಒಂದು ವೇಳೆ ಸುಧಾರಿಸದಿದ್ದರೆ ಲೈಂಗಿಕ ತಜ್ಞರ ಬಳಿ ಚಿಕಿತ್ಸೆ ಪಡೆದುಕೊಳ್ಳಿ.Cute-Lovers-love-31786045-500-375

ಪ್ರಶ್ನೆ 2. ನನಗೆ 33 ವರ್ಷ. ಲೈಂಗಿಕ ಜೀವನ ಬೇಗನೆ ಆರಂಭವಾಯಿತು. ಕೆಲವು ವರ್ಷಗಳ ಹಿಂದೆಯೇ ನನಗೆ ತೀವ್ರ ಉದ್ರೇಕಗೊಳ್ಳುವುದು ನಿಂತುಹೋಗಿದೆ. ದೀರ್ಘಾವಧಿ ವರೆಗೆ ಲೈಂಗಿಕ ಕ್ರಿಯೆ ನಡೆಸಲಾಗುವುದಿಲ್ಲ. ನನ್ನ ಸ್ನೇಹಿತನೊಬ್ಬ Suhagra ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ಹೇಳಿದ್ದ. ಒಂದು ಮಾತ್ರೆ ತೆಗೆದುಕೊಂಡರೆ ನನ್ನ ಸಮಸ್ಯೆ ಪರಿಹಾರಕ್ಕೆ ನೆರವಾಗುತ್ತಿತ್ತು. ಆದರೆ ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಸೆಕ್ಸ್ ನಡೆಸಲಾಗುತ್ತಿರಲಿಲ್ಲ. ಆರು ವರ್ಷಗಳಿಂದ ಈ ಮಾತ್ರೆಯನ್ನು ಸೇವಿಸುತ್ತಾ ಇದ್ದೇನೆ. ನನ್ನ ಸ್ನೇಹಿತ 50 ಎಂಜಿ ಬದಲು 100 ಎಂಜಿ ಮಾತ್ರೆ ತೆಗೆದುಕೊಳ್ಳುವಂತೆ ಹೇಳಿದ. ಕಳೆದ ವರ್ಷದಿಂದ ನನ್ನ ತೂಕ ಹೆಚ್ಚಾಗುತ್ತಿದೆ. ನನ್ನಲ್ಲಿ ಉದ್ರೇಕಗೊಳ್ಳುವುದು ಕಡಿಮೆಯಾಗಿದೆ. ಆದೃಷ್ಟವೆಂದರೆ ನನ್ನ ಪತ್ನಿ ತುಂಬಾ ಸಹಕಾರ ನೀಡುತ್ತಾಳೆ.  ನನ್ನ ಬಿಪಿ, ಶುಗರ್ ಮತ್ತು ಕೊಲೆಸ್ಟರಾಲ್ ಎಲ್ಲ ನಾರ್ಮಲ್ ಆಗಿದೆ. ನಾನು ಯಾವುದಾದರೂ ಸಮಸ್ಯಯಿಂದ ಬಳಲುತ್ತಿದ್ದೇನೆಯೇ ?

ವೈದ್ಯರ ಉತ್ತರ: ನಿಮ್ಮ ಸ್ನೇಹಿತನನ್ನ ನೀನು ಲೈಂಗಿಕ ತಜ್ಞನೇ ಎಂದು ಯಾಕೆ ನೀವು ಕೇಳಲಿಲ್ಲ ? ಇದೊಂದು ಅಪರೂಪದ ಪ್ರಕರಣ. ನೀವು ಈ ವಯಸ್ಸಿನಲ್ಲೇ ಮಾತ್ರೆಗಳನ್ನು ಅವಲಂಬಿಸುವಂತಾಗಿದೆ. ನಿಮ್ಮ ದಿನಚರಿಯನ್ನು ಪರಿಶೀಲಿಸಿ. ವಿಶೇಷವಾಗಿ ನಿಮ್ಮ ತೂಕವನ್ನು. ನಿಮಗೆ ಲೈಂಗಿಕ ತಜ್ಞರು ಸಹಾಯಮಾಡಬಹುದು.