ಮಾಜಿ ಸಚಿವ ರಾಮದಾಸ್-ಪ್ರೇಮಕುಮಾರಿ ಪ್ರೇಮ ಪ್ರಕರಣ; ಒಂದೇ ಕೋರ್ಟ್ ನಲ್ಲಿ ಎರಡು ಪ್ರಕರಣಗಳ ವಿಚಾರಣೆ….

0
1028
Former minister Ramdas-Prema Kumari's love- affair-Two cases -same court

ಮೈಸೂರು,ಏ,21,2017(www.justkannada.in):  ಮಾಜಿ ಸಚಿವ ರಾಮದಾಸ್-ಪ್ರೇಮಕುಮಾರಿ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರಕರಣಗಳನ್ನ ಒಂದೇ ಕೋರ್ಟ್ ನಲ್ಲಿ ವಿಚಾರಣೆ ನಡೆಸಲು  ಕೋರ್ಟ್ ಸಮ್ಮತಿ ಸೂಚಿಸಿದೆ.Former minister Ramdas-Prema Kumari's love- affair-Two cases -same court

ರಾಮದಾಸ್ ಹಾಗೂ ಪ್ರೇಮಕುಮಾರಿ ಪರಸ್ಪರ ದೂರಿರುವ ಎಲ್ಲಾ ಪ್ರಕರಣ ಒಂದೇ ಕೋರ್ಟ್ ನಲ್ಲಿ ವಿಚಾರಣೆ ನಡೆಸುವಂತೆ ಪ್ರೇಮಕುಮಾರಿ ಪರ ವಕೀಲ ಅಮೃತೇಶ್ ಮನವಿ ಮಾಡಿದ್ದರು. ಹಿರಿಯ ವಕೀಲ ಅಮೃತೇಶ್ ಮನವಿ ಮಾನ್ಯ ಮಾಡಿದ ಮೈಸೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಪಿ.ಜಿಎಂ. ಪಾಟೀಲ್ ಆದೇಶಿಸಿದ್ದಾರೆ.

ಸಿಐಡಿ ತನಿಖೆ ನಡೆಸಿದ ಎರಡೂ ಪ್ರಕರಣಗಳು ಇನ್ಮುಂದೆ ಒಂದೇ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದ್ದು, ಪ್ರೇಮಕುಮಾರಿ ವಿರುದ್ಧ ಚಾರ್ಜ್ ಶೀಟ್  ರಾಮದಾಸ್ ವಿರುದ್ಧ ಬಿ ರಿಪೋರ್ಟ್  ನ್ನ ಸಿಐಡಿ ಅಧಿಕಾರಿಗಳು ಸಲ್ಲಿಸಿದ್ದಾರೆ. ಇದನ್ನ ಪ್ರಶ್ನೆ ಮಾಡಿ ವಕೀಲ ಅಮೃತೇಶ್ ಸಲ್ಲಿಸಿದ್ದ ಅರ್ಜಿಯನ್ನ ಕೋರ್ಟ್ ಪುರಸ್ಕರಿಸಿದೆ. ಇದರಿಂದ ಮಾಜಿ ಸಚಿವ ರಾಮದಾಸ್ ಅವರಿಗೆ ಕಾನೂನು ಸಂಕಟ ಆರಂಭವಾದಂತಾಗಿದೆ.

Key words: Former minister Ramdas-Prema Kumari’s love- affair-Two cases -same court