ಬೆಂಗಳೂರು,ಜ,12,2017(www.justkannada.in):  ಬಿಜೆಪಿ ಎಂಎಲ್ ಸಿ ಗಳ ಸಭೆಗೆ ಅಹ್ವಾನ ನೀಡದ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಂದ ಬೆನ್ನಲ್ಲೆ ಇದೀಗ ಪರಿಷತ್ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪಗೆ ಸಭೆಯಲ್ಲಿ ಪಾಲ್ಗೊಳ್ಳುವಂತೆ ಬಿಎಸ್ ಯಡಿಯೂರಪ್ಪ ಬುಲಾವ್ ನೀಡಿದ್ದಾರೆ.  followed -media reports –alleged- meeting –ks eshwarappa

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿಚಾರಕ್ಕೆ ಸಂಬಂಧಿಸಿದಂತೆ ಬಿಎಸ್ ಯಡಿಯೂರಪ್ಪ ಹಾಗೂ ನಡುವಿನ ಕಚ್ಚಾಟದ ತಾರಕಕ್ಕೇರಿ ಬ್ರಿಗೇಡ್ ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಳದಂತೆ ಬಿಎಸ್ ಯಡಿಯೂರಪ್ಪ ಪಕ್ಷದ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದರು.

ಈ ನಡುವೆ  ಅಗ್ನೇಯ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಸಿದ್ದತೆ ಬಗ್ಗೆ ಚರ್ಚಿಸಲು ಬಿಜೆಪಿ ರಾಜ್ಯಾಧ್ಯಕ್ಷ ಇಂದು ಸಂಜೆ 7 ಗಂಟೆಗೆ ಎಂಎಲ್ ಸಿಗಳ ಸಭೆ ಕರೆದಿದ್ದಾರೆ. ಅಲ್ಲದೆ ಸಭೆಯಲ್ಲಿ ಭಾಗವಹಿಸುವಂತೆ ಬಿಜೆಪಿಯ ಎಂಎಲ್ ಸಿಗಳಿಗೆ ಸೂಚನೆ ನೀಡಿದ್ದರು. ಆದರೆ ಸಭೆಗೆ ಪರಿಷತ್ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪಗೆ ಅಹ್ವಾನ ನೀಡಿರಲಿಲ್ಲ.

ಬಿಎಸ್ ವೈ ನ ಈ ನಡೆ ಮತ್ತಷ್ಟು ಕುತೂಹಲಕ್ಕೀಡು ಮಾಡಿಕೊಟ್ಟತ್ತು ಅಲ್ಲದೆ ವಿಪಕ್ಷ ಸ್ಥಾನದಿಂದ ಕೆಎಸ್ ಈಶ್ವರಪ್ಪಗೆ ಕೋಕ್ ನೀಡುವ ಬಗ್ಗೆ ಸುದ್ದಿಗಳು ಹಬ್ಬಿದ್ದವು. ಈ ಕುರಿತು ಮಾಧ್ಯಮಗಳಲ್ಲಿ ವರದಿ ಬಂದ ಬಳಿಕ ಇದೀಗ ಎಂಎಲ್ ಸಿಗಳ ಸಭೆಗೆ ಭಾಗವಹಿಸುವಂತೆ ಶಿವಮೊಗ್ಗದಲ್ಲಿರುವ ಈಶ್ವರಪ್ಪಗೆ ಮೊಬೈಲ್ ಮೂಲಕ ಸಂದೇಶ ರವಾನಿಸಿದ್ದಾರೆ.

Key words:   followed -media reports –alleged- meeting –ks eshwarappa