ಮುಂದಿನ ವರ್ಷ ಮಾರುಕಟ್ಟೆಗೆ ಬರಲಿದೆ ಮಡಚಿಡಬಹುದಾದ ಸ್ಮಾಟ್ ಫೋರ್ನ್ !

0
947

ದುಬೈ, ಡಿಸೆಂಬರ್ 27 (www.justkannada.in): ಶೀಘ್ರದಲ್ಲೇ ಸ್ಯಾಮ್‌ಸಂಗ್ ಮಡಚಬಹುದಾದ ಸ್ಮಾಟ್ ಫೋರ್ನ್ ಅನ್ನು ಆವಿಷ್ಕರಿಸಲಿದೆ. ಮಡಚಬಹುದಾದ ಅಂದ್ರೆ ಫೋಲ್ಡೇಬಲ್ ಸ್ಮಾರ್ಟ್‌ಫೋನ್.

ಈ ಫೋನನ್ನು ನೀವು ನಾನಾ ರೀತಿಗಳಲ್ಲಿ ಮಡಚಬಹುದು. ಅಗತ್ಯಕ್ಕೆ ತಕ್ಕಂತೆ ದೊಡ್ಡದಾಗಿ, ಚಿಕ್ಕದಾಗಿ ಮಾಡಿಕೊಳ್ಳಬಹುದಾದ ಸೌಲಭ್ಯ ಇದರಲ್ಲಿ ಇದೆ. ಅದೂ ಅಲ್ಲದೇ ಇನ್ನೂ ಹಲವಾರು ಹೊಸ ತಂತ್ರಜ್ಞಾನಗಳನ್ನು ಇದು ಹೊಂದಿದ್ದು, ಈ ಬಗ್ಗೆ ಕಂಪನಿ ಪೂರ್ಣ ವಿವರಗಳನ್ನು ನೀಡಿಲ್ಲ. ಸುಮಾರು ಆರು ವರ್ಷಗಳಿಂದ ಇಂಥದ್ದೊಂದು ಫೋನ್ ಅನ್ನು ಆವಿಷ್ಕರಿಸುವ ಪ್ಲಾನ್ ಅನ್ನು ಸ್ಯಾಮ್‌ಸಂಗ್ ಹಾಕಿಕೊಂಡಿತ್ತು.

ಸದ್ಯ ಈ ಪ್ಲಾನ್ ಈಡೇರುವ ಸಾಧ್ಯತೆ ಇದೆ. ಈ ಸಂಬಂಧ ಕಂಪನಿಯ ಉನ್ನತ ಮೂಲಗಳು ಹೇಳಿಕೊಂಡಿರುವ ಪ್ರಕಾರ ಈಗಾಗಲೇ ತಂತ್ರಜ್ಞಾನಕ್ಕೆ ಹಕ್ಕು ಸ್ವಾಮ್ಯ ಪಡೆದುಕೊಳ್ಳಲಾಗಿದೆಯಂತೆ. ಕೊನೆಯ ದಾಗಿ ಫೋನ್ ಪರೀಕ್ಷಾ ಹಂತದಲ್ಲಿದ್ದು, ಸುರಕ್ಷತೆಗೆ ಒತ್ತು ನೀಡಲಾಗಿದೆ. ಇದು ಸಮಸ್ಯೆಗಳಿಂದ ಹೊರತಾಗಿದೆ ಎಂದು ಅನ್ನಿಸಿದ ತಕ್ಷಣ ಮಾರುಕಟ್ಟೆಗೆ ಬರಲಿದೆ. ಎಲ್ಲವೂ ಅಂದುಕೊಂಡತೆ ಆದರೆ ಮುಂದಿನ ವರ್ಷದ ಆರಂಭದ ತಿಂಗಳುಗಳಲ್ಲಿ ಫೋಲ್ಡೇಬಲ್ ಸ್ಮಾರ್ಟ್ ಫೋನ್ ಬಳಕೆಗೆ ದೊರೆಯಲಿದೆ.