ಮೈಸೂರು,ಫೆಬ್ರವರಿ,13,2018(www.justkannada.in): ರಾಜ್ಯ ಸರ್ಕಾರ ನೀಡುವ ಅನ್ನಭಾಗ್ಯ ಅಕ್ಕಿಯಲ್ಲಿ ಪ್ಲಾಸ್ಟಿಕ್ ತುಂಡುಗಳು ಪತ್ತೆಯಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.find-out-plastic-pieces-rice

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ತಿರುಮಲಾಪುರ ಗ್ರಾಮದಲ್ಲಿ  ಅನ್ನಭಾಗ್ಯ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದೆ. ನ್ಯಾಯಬೆಲೆ ಅಂಗಡಿಯಿಂದ ಪಡಿತರ ಪಡೆದು ಮನೆಗೆ ಹೋದ ಬಳಿಕ ಅಕ್ಕಿಯನ್ನು ನೀರಿನಲ್ಲಿ ತೊಳೆದಾಗ  ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದೆ ನೀರಿನಲ್ಲಿ ಪ್ಲಾಸ್ಟಿಕ್ ಅಕ್ಕಿ ತೇಲಾಡಿದೆ.find-out-plastic-pieces-rice

ಈ ಬಗ್ಗೆ ಅನುಮಾನಗೊಂಡ ಗ್ರಾಮಸ್ಥರಿಂದ ಪರಿಶೀಲನೆ ನಡೆಸಿದ್ದು, ಪ್ಲಾಸ್ಟಿಕ್‌ ಅಕ್ಕಿ ಅಂತ ದೃಢವಾದ ಮೇಲೆ ಪಡಿತರ ಕೇಂದ್ರಕ್ಕೆ ಗ್ರಾಮಸ್ಥರು ದೂರು‌ ನೀಡಿದ್ದಾರೆ.

Key words: Find out- plastic- pieces -rice