ಮೈಸೂರು,ಮಾ,20,2017(www.justkannada.in): ನಂಜನಗೂಡು ಹಾಗೂ ಗುಂಡ್ಲುಪೇಟೆ ಚುನಾವಣಾ ಕಣ ರಂಗೇರಿದ್ದು ಇಂದು ಎರಡು ಕ್ಷೇತ್ರದ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೆ  ನಾಳೆ ಕೊನೆ ದಿನವಾಗಿದ್ದು, ಒಂದು ದಿನ ಬಾಕಿ ಇರುವಂತೆ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಆ ಮೂಲಕ ಕ್ಷೇತ್ರದಲ್ಲಿ ಅಸಲಿ ಆಟ ಶುರುವಾಗಿದೆ.

ರಾಜಕೀಯ ಧ್ರುವೀಕರಣದಲ್ಲಿ ಸದ್ಯ ನಂಜನಗೂಡು ಮೀಸಲು ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದೆ. ಮಾಜಿ ಸಚಿವರಾಗಿದ್ದ ಶ್ರೀನಿವಾಸ ಪ್ರಸಾದ್​ ಅವರ ರಾಜೀನಾಮೆಯಿಂದಾಗಿ ಕ್ಷೇತ್ರದಲ್ಲಿ ಉಪ ಚುನಾವಣೆ ಎದುರಾಗಿದೆ. ಹೀಗಾಗಿ ಶ್ರೀನಿವಾಸ ಪ್ರಸಾದ್​ ಹಾಗೂ ಜೆಡಿಎಸ್​ ನಿಂದ ಕಾಂಗ್ರೆಸ್​ ಪಕ್ಷಕ್ಕೆ ಹಾರಿರುವ ಕಳಲೆ ಕೇಶವಮೂರ್ತಿ ತಮ್ಮ ಅದೃಷ್ಟದ ಪರೀಕ್ಷೆಗೆ ಮುಂದಾಗಿದ್ದಾರೆ.

ಏಪ್ರಿಲ್ 9 ರಂದು ಚುನಾವಣೆ ನಡೆಯಲಿದ್ದು, ಏಪ್ರಿಲ್ 13ರಂದು ಅಭ್ಯರ್ಥಿಗಳ ಭವಿಷ್ಯ ತಿಳಿಯಲಿದೆ.  ಈ ನಡುವೆ  ಇಂದು ಕಾಂಗ್ರೆಸ್​ ಪಕ್ಷದ ಅಭ್ಯರ್ಥಿ ಕಳಲೆ ಕೇಶವಮೂರ್ತಿ ನಾಮಪತ್ರ ಸಲ್ಲಿಸಿದರು. ಮೊದಲಿಗೆ ರಾಷ್ಟ್ರಪತಿ ರಸ್ತೆಯಲ್ಲಿರುವ ವಿನಾಯಕ ದೇಗುಲದಲ್ಲಿ ಪೂಜೆ ಸಲ್ಲಿಸಿ, ಬಳಿಕ ಸಾವಿರಾರು ಬೆಂಬಲಿಗರ ಮೂಲಕ ಮೆರವಣಿಗೆ ನಡೆಸಿದರು.

ಉಸ್ತುವಾರಿ ಸಚಿವ ಮಹದೇವಪ್ಪ, ಸಂಸದ ಧ್ರುವ ನಾರಾಯಣ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್​ ಗುಂಡೂರಾವ್ ಅವರ ಸಮ್ಮುಖದಲ್ಲಿ ಕಳಲೆ ಕೇಶವಮೂರ್ತಿ ನಾಮಪತ್ರ ಸಲ್ಲಿಸಿದರು.

ಕಾರ್ಯಕರ್ತರ ಅಭೂತಪೂರ್ವ ಬೆಂಬಲನೋಡಿ ಸಂತಷವಾಗಿದೆ .

ಪಂಜರದ ಗಿಳಿಯಾಗಿದ್ದ ನಂಜನಗೂಡಿನ ಜನ ಈಗ ಹೊರಬಂದು ಕಳಲೆ ಕೇಶವ ಮೂರ್ತಿ ಅವರಿಗೆ ಬೆಂಬಲ ನೀಡಿದ್ದಾರೆ. ಬೆಂಕಿ ಮಹದೇವ್ ಅವರ ಪತ್ನಿ ನಮಗೆ ಬೆಂಬಲ ನೀಡುವ ವಿಶ್ವಾಸವಿದೆ. ಈ ಹಿಂದೆ ಬೆಂಕಿ ಮಹದೇವ್ ಅವರು ಸ್ನೇಹಪರ ರಾಜಕಾರಣ ಮಾಡಿಕೊಂಡು ಬಂದಿದ್ರು. ಸದ್ಯ ನಡೆಯವು ಚುನಾವಣೆಯಲ್ಲಿ ಕೋಮುವಾದಿ ಪಕ್ಷವನ್ನ ದೂರವಿರಿಸಿ ಎಂದು  ಸಚಿವ ಮಹದೇವಪ್ಪ ಹೇಳಿದರು.

ಬಿಜೆಪಿ ನಾಯಕರಿಂದಲೂ  ದೇವಾಲಯದಲ್ಲಿ ಪೂಜೆ ಸಲ್ಲಿಕೆ…

ಬಿಜೆಪಿ ನಾಯಕರೂ ಸಹ ನಾಮ ಪತ್ರ ಸಲ್ಲಿಕೆಗೆ ಮುನ್ನ ರಾಷ್ಟ್ರ ಪತಿ ರಸ್ತೆಯಲ್ಲಿರುವ ಗಣಪತಿ ದೇವಾಲಯಕ್ಕೆ ಆಗಮಿಸಿದ್ರು. ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ ಪ್ರಸಾದ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ವಿ. ಸೋಮಣ್ಣ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ನಾಮಪತ್ರ ಸಲ್ಲಿಕೆ ಕೇಂದ್ರಕ್ಕೆ ತೆರಳಿದರು

ಅಪಾರ ಬೆಂಬಲಿಗರ ಜೊತೆ ಶ್ರೀನಿವಾಸ ಪ್ರಸಾದ್​ ತೆರೆದ ವಾಹನದಲ್ಲಿ ತೆರಳಿ, ಮಾಜಿ ಸಿಎಂ ಯಡಿಯೂರಪ್ಪ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು.

ಈ ಬಗ್ಗೆ ಮಾತನಾಡಿದ ಬಿಎಸ್ ಯಡಿಯೂರಪ್ಪ, ರಾಜ್ಯ ಸರ್ಕಾರದ ದುರಾಡಳಿತ ಮತ್ತು ಶ್ರೀನಿವಾಸ ಪ್ರಸಾದ್ ಅವರ ನಾಯಕತ್ವ ಮುಂದಿಟ್ಟುಕೊಂಡು ಚುನಾವಣೆ ನಡೆಸಲಿದ್ದೇವೆ ಅಂತ ಹೇಳಿದ್ರು

ಒಟ್ಟಾರೆ, ಕ್ಷೇತ್ರದಲ್ಲಿ ಎರಡೂ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಸಿದ್ದು, ಇವರ ಜೊತೆಗೆ ಮೂವರು ಪಕ್ಷೇತರರು ಸದ್ಯ ಕಣದಲ್ಲಿದ್ದಾರೆ. ಈ ನಡುವೆ ಜೆಡಿಎಸ್ ಪಕ್ಷ​ ಅಭ್ಯರ್ಥಿಯನ್ನ ಕಣಕ್ಕಿಳಿಸದೆ ತಟಸ್ಥವಾಗಿದ್ದು, ಪರೋಕ್ಷವಾಗಿ ಕಾಂಗ್ರೆಸ್​​ಗೆ ಬೆಂಬಲ ಸೂಚಿಸಲಿದೆ ಎನ್ನಲಾಗುತ್ತಿದೆ. ಅದೇನೆ ಆದರೂ, ಅಸಲಿ ಆಟ ಈಗ ಶುರುವಾಗಿದ್ದು, ಮತದಾರ ಪ್ರಭು ಯಾರಿಗೆ ನಂಜುಂಡನ ಪ್ರಸಾದ ನೀಡಲಿದ್ದಾನೆ ಎಂಬುದನ್ನ ಕಾದು ನೋಡಬೇಕಿದೆ.

Key words: Fight -win –elections-game -will now