ಹಾಸನ,ಫೆಬ್ರವರಿ,13,2018(www.justkannada.in): ಮಹಾ ಮಸ್ತಕಾಭಿಷೇಕ ಹಿನ್ನೆಲೆ, ಫೆಬ್ರವರಿ19ಕ್ಕೆ ಶ್ರವಣಬೆಳಗೊಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.february-19-prime-minister-narendra-modi-visit-shravanabelagola

ಅಂದು ಮಧ್ಯಾಹ್ನ 12.45 ರಿಂದ 1.30ರ  ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಶ್ರವಣಬೆಳಗೊಳಕ್ಕೆ  ಬಂದು ಹೋಗಲಿದ್ದಾರೆ  ಎಂದು ಹಾಸನ ಡಿಸಿ ಕಚೇರಿಯಿಂದ ಅಧಿಕೃತ ಮಾಹಿತಿ ಲಭ್ಯವಾಗಿದೆ, ಮಹಾಮಸ್ತಕಾಭಿಷೇಕ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಹೆಲಿಕಾಪ್ಟರ್ ನಲ್ಲಿ ಬಾಹುಬಲಿಗೆ  ಪುಷ್ಪಾರ್ಚನೆ ಮಾಡುವ ಸಾಧ್ಯತೆ ಇದೆ.february-19-prime-minister-narendra-modi-visit-shravanabelagola

ಈವರೆಗೂ ಪ್ರಧಾನಿ ಆಗಮನದ ಬಗ್ಗೆ ಮಾಹಿತಿ ಖಚಿತ ಆಗಿರಲಿಲ್ಲ, ಈ ಹಿಂದೆ ಇಂದಿರಾಗಾಂಧಿ, ನರಸಿಂಹರಾವ್ ಮೊದಲಾದವರು ಬಂದು ಹೋಗಿದ್ದರು,

Key words: February 19- Prime Minister Narendra Modi -visit –Shravanabelagola