ಪ್ರತಿಯೊಂದು ಕ್ಯಾಂಟಿನ್ ನಲ್ಲಿ ಪ್ರತಿದಿನ 1500 ಜನರಿಗೆ ಊಟ ಪೂರೈಕೆ ಮಾಡುವ ನಿರೀಕ್ಷೆ- ಬಿಬಿಎಂಪಿ ಮೇಯರ್ ಜಿ. ಪದ್ಮಾವತಿ…

0
470
Expect - feed -1500 people-canteen BBMP -Mayor G. Padmavathi.

ಬೆಂಗಳೂರು,ಆ,12,2017(www.justkannada.in): ಬಡವರಿಗಾಗಿ ತೆರೆಯಲಾಗುತ್ತಿರುವ ಪ್ರತಿಯೊಂದು ಇಂದಿರಾ ಕ್ಯಾಂಟಿನ್ ನಿಂದ ಪ್ರತಿದಿನ 1500 ಜನರಿಗೆ ಊಟ ಪೂರೈಸುವ ನಿರೀಕ್ಷೆಯಿದೆ ಎಂದು ಬಿಬಿಎಂಪಿ ಮೇಯರ್ ಜಿ.ಪದ್ಮಾವತಿ ತಿಳಿಸಿದರು.Expect - feed -1500 people-canteen BBMP -Mayor G. Padmavathi.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮೇಯರ್ ಪದ್ಮಾವತಿ ಅವರು, ಮೊದಲು 101 ಇಂದಿರಾ ಕ್ಯಾಂಟಿನ್ ತೆರೆಯುತ್ತೇವೆ. ಪ್ರತಿಯೊಂದು ಕ್ಯಾಂಟಿನ್ ತೆರೆಯಲು 28.58 ಲಕ್ಷ ಖರ್ಚಾಗಲಿದೆ. ಬೆಳಿಗ್ಗೆ 5 ರೂಪಾಯಿಗೆ ತಿಂಡಿ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ 10 ರೂಪಾಯಿ ನಿಗದಿ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಬಡವರಿಗಾಗಿ ಸರ್ಕಾರ ಬಿಬಿಎಂಪಿ ವ್ಯಾಪ್ತಿಯ 197 ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟಿನ್ ತೆರೆಯಲು ಸಿದ್ದತೆ ನಡೆಸಿಕೊಂಡಿದೆ. ಈ ಬಗ್ಗೆ ಕಳೆದ ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು.

key words:Expect – feed -1500 people-canteen BBMP -Mayor G. Padmavathi.