ಟ್ವಿಟ್ಟರ್’ನಲ್ಲಿ ಸೆಹ್ವಾಗ್ ಟ್ವೀಟ್ ವೈರಲ್: ಗಂಡಂದಿರ ಬಗ್ಗೆ ವೀರು ಹೇಳಿದ್ದು ಹೀಗೆ….

0
1751

ನವದೆಹಲಿ, ಏಪ್ರಿಲ್ 17 (www.justkannada.in): ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮಾಡಿರುವ ಟ್ವಿಟ್ ಒಂದು ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ!

ಯೆಸ್. ಸದಾ ಟ್ವಿಟ್ಟರ್ ಮೂಲಕ ಅವರಿವರ ಕಾಲೆಳೆಯುತ್ತಿದ್ದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮನೆಯಲ್ಲಿದ್ದಾಗ ಪತ್ನಿ ಮುಂದೆ ಹೇಗಿರುತ್ತಾರೆ ಎಂಬುದರ ಬಗ್ಗೆ ಟ್ವಿಟ್ಟರ್ ನಲ್ಲಿ ಬಹಿರಂಗ ಪಡಿಸಿದ್ದಾರೆ.

ಸೆಹ್ವಾಗ್ ಟ್ವಿಟ್ಟರ್ ನಲ್ಲಿ ಹಾಕಿದ ಪೋಸ್ಟ್ ಗೆ 2 ಗಂಟೆಗಳಲ್ಲಿ 6.800 ಲೈಕ್ಸ್ ಹಾಗೂ 1ಸಾವಿರ ರಿಟ್ವೀಟ್ ಗಳು ಬಂದಿವೆ. ಗಂಡನ ಸ್ಥಿತಿ ಸ್ಪ್ಲಿಟ್ ಎಸಿ ಇದ್ದಂತೆ. ಹೊರಗಡೆ ಎಷ್ಟು ದೊಡ್ಡ ಮಟ್ಟಿಗೆ ಶಬ್ದ ಮಾಡಿದರೂ ಮನೆಯ ಒಳಗೆ ಕೂಲ್, ಸೈಲೆಂಟ್ ಮತ್ತು ರಿಮೋಟ್ ಕಂಟ್ರೋಲ್ಡ್ ಎಂದು ಟ್ವೀಟ್ ಮಾಡಿದ್ದಾರೆ!

ಗಂಡನ ಪರಿಸ್ಥಿತಿಯ ಬಗ್ಗೆ ಟ್ವೀಟ್ ಮಾಡಿರುವ ವಿರೇಂದ್ರ ಸೆಹ್ವಾಗ್ ತಮ್ಮ ಪತ್ನಿ ಆರತಿ ಜೊತೆಗಿನ ಸುಂದರ ಫೋಟೋ ಪೋಸ್ಟ್ ಮಾಡಿದ್ದಾರೆ. ಸೆಹ್ವಾಗ್ ಟ್ವೀಟ್ ಗೆ ಹಲವು ಮಂದಿ ಪ್ರತಿಕ್ರಿಯೆ ನೀಡಿದ್ದು, ಗಂಡನ ಪರಿಸ್ಥಿತಿಯ ಬಗ್ಗೆ ವಿವರಿಸಿರುವ ಸೆಹ್ವಾಗ್ ಅನ್ನು ಎಲ್ಲರು ಮೆಚ್ಚಿ ಹೊಗಳಿದ್ದಾರೆ.