ಉತ್ತರ ಕನ್ನಡ,ಏ,20,2017(www.justkannada.in): ಲಂಚ ಸ್ವೀಕರಿಸುವಾಗ ಪರಿಸರ ಅಧಿಕಾರಿಯೊಬ್ಬರು ರೆಡ್ ಹ್ಯಾಂಡ್ ಆಗಿ ಎಸಿಬಿ  ಬಲೆಗೆ ಬಿದ್ದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.Environmental Officer -dropped -ACB - red hand –receiving- bribe .

ಸುಗಂಧ ಕುರಿ ಎಸಿಬಿ ಬಲೆಗೆ ಬಿದ್ದ ಪರಿಸರ ಅಧಿಕಾರಿ, ಇವರ ಜತೆಗೆ  ಜಿಲ್ಲಾ ಸಹಾಯಕ ಪರಿಸರ ಅಧಿಕಾರಿ ಕುಮಾರಸ್ವಾಮಿ ಹಾಗೂ ಕಚೇರಿಯ ಸಹಾಯಕ ಚಂದ್ರಕಾಂತ್ ರನ್ನ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.  ಗೇರು ಬೀಜ ಕಾರ್ಖಾನೆ  ನಿರ್ಮಾಣಕ್ಕಾಗಿ  ಎನ್ ಒಸಿ ನೀಡಲು ಶ್ರೀನಿವಾಸ್ ಎಂಬುವವರ ಬಳಿ 15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ನಡುವೆ ಕಾರವಾರದಲ್ಲಿರುವ ಕಚೇರಿಯಲ್ಲಿ  ಅಧಿಕಾರಿ ಸುಗಂಧ ಕುರಿ ಲಂಚ ಸ್ವೀಕರಿಸಿ ಸಹಾಯಕ ಚಂದ್ರಕಾಂತ್  ಗೆ ನೀಡಿದ್ದಾರೆ.

ಈ ವೇಳೆ ಚಂದ್ರಕಾಂತ್ ಹಣ ಕೊಂಡೊಯ್ಯುವಾಗ  ಎಸಿಬಿ ಡಿವೈಎಸ್ಪಿ ಗಿರೀಶ್ ನೇತೃತ್ವದಲ್ಲಿ ದಾಳಿ ನಡೆಸಿ ಹಣ ಹಾಗೂ  ಮೂವರನ್ನ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

Key words: Environmental Officer -dropped -ACB – red hand –receiving- bribe .