ಸ್ವಾಧೀನಪಡಿಸಿದ್ದ ಭೂಮಿಗೆ ಪರಿಹಾರ ನೀಡದ ಆರೋಪ;ಮೈಸೂರಿನ ಕೆಐಎಡಿಬಿ ಕಚೇರಿ ಪಿಠೋಪಕರಣ ಜಪ್ತಿ….

0
5008

kiadb mysoreಮೈಸೂರು,ಜ,13,2017(www.justkannada.in): ಸ್ವಾಧೀನಪಡಿಸಿಕೊಂಡಿದ್ದ ಭೂಮಿಗೆ ಪರಿಹಾರ ನೀಡದ ಆರೋಪ ಸಂಬಂಧ ಮೈಸೂರಿನ ಕೆಆರ್ ಎಸ್ ರಸ್ತೆಯಲ್ಲಿರುವ ಕೆಐಎಡಿಬಿ( ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ) ಕಚೇರಿಯ ಪಿಠೋಪಕರಣಗಳನ್ನ ಜಪ್ತಿ ಮಾಡಲಾಗಿದೆ.

2007 ರಂದು ಮಂಡಕಳ್ಳಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ರಾಮಸ್ವಾಮಿ ಎಂಬುವವರಿಗೆ ಸೇರಿದ್ದ 15 ಎಕರೆ 33 ಗುಂಟೆ ಜಮೀನನ್ನ ಸ್ವಾಧೀನ ಪಡಿಸಲಾಗಿತ್ತು. ಆ ವೇಳೆ ರಾಮಸ್ವಾಮಿ ಅವರಿಗೆ 4ಕೋಟಿ ಪರಿಹಾರ ಘೋಷಿಸಲಾಗಿತ್ತು. ಆದರೆ ರಾಮಸ್ವಾಮಿ ಅವರು ಪರಿಹಾರ ಕಡಿಮೆ ಇದೆ ಎಂದು ಆರೋಪಿಸಿ ಮೈಸೂರಿನ 2ನೇ ಹೆಚ್ಚುವರಿ ಹಿರಿಯ ಸಿವಿಲ್ ಕೋರ್ಟ್ ಗೆ ಅರ್ಜಿಸಲ್ಲಿಸಿದ್ದರು.
ಈ ಕುರಿತು ವಿಚಾರಣೆ ನಡೆಸಿದ್ದ ಕೋರ್ಟ್ ರಾಮಸ್ವಾಮಿ ಅವರಿಗೆ 32 ಕೋಟಿ ಪರಿಹಾರ ನೀಡುವಂತೆ ಆದೇಶಿಸಿತ್ತು. ಅಲ್ಲದೆ ಹಣ ನೀಡುವವರೆಗೆ ನಿತ್ಯ 1.32 ಲಕ್ಷ ಬಡುವಂತೆ ಸೂಚನೆ ನೀಡಿತ್ತು. ಆದರೆ ಈವರೆಗೆ ಕೆಐಎಡಿಬಿ ಹಣ ನೀಡಿರಲಿಲ್ಲ. ಹೀಗಾಗಿ ಕೆಐಎಡಿಬಿ ಕಚೇರಿಯ ಪಿಠೋಪಕರಣ ಜಪ್ತಿಗೆ ಕೋರ್ಟ್ ಆದೇಶಿಸಿದ್ದು ಅಂತೆಯೇ ಇಂದು ಪಿಠೋಪಕರಣವನ್ನ ಜಪ್ತಿ ಮಾಡಲಾಗಿದೆ ಎನ್ನಲಾಗುತ್ತಿದೆ.
Key words: earth – compensate – accused- Mysore- Office Furniture –seized- However ….