ಬೆಂಗಳೂರು,ಜೂ,19,2017(www.justkannada.in):  ಕಸ ಸಂಗ್ರಹ ವಿಂಗಡಣೆಗಾಗಿ ನಗರೋತ್ಥಾನ ಯೋಜನೆ ಅಡಿಯಲ್ಲಿ 2232 ಡಸ್ಟ್ ಬಿನ್ ಗಳ ಜೋಡಿ ಡಬ್ಬಗಳ ಅಳವಡಿಕೆಯ ಕಾರ್ಯಕ್ರಮಕ್ಕೆ ಬೆಂಗಳೂರಿನಲ್ಲಿ  ಚಾಲನೆ ನೀಡಲಾಯಿತು.dump bins -collection -garbage collections -Nagroothana Project.

ಗಾಂಧಿನಗರದ ನ್ಯಾಷನಲ್ ಮಾರ್ಕೆಟ್ ಬಳಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ಬೆಂಗಳೂರು ಅಭಿವೃದ್ದಿ ಸಚಿವ ಕೆ.ಜೆ ಜಾರ್ಜ್ ,ಮೇಯರ್ ಪದ್ಮಾವತಿ ಮತ್ತು ಆಯುಕ್ತರು ಮಂಜುನಾಥ್ ಪ್ರಸಾದ್ ಚಾಲನೆ ನೀಡಿದರು. ಜನ ನಿಬಿಡ ಪ್ರದೇಶಗಳಲ್ಲಿ ಕಸ ಸಂಗ್ರಹ ಮಾಡಲು ಪ್ರತ್ಯೇಕ ಎರಡು ಡಬ್ಬಗಳನ್ನು ಇಡಲಾಗಿದ್ದು, ಸಂಗ್ರಹಣೆ ಮಾಡುವಾಗಲೇ ಒಣ ತ್ಯಾಜ್ಯ ಹಾಗೂ ಹಸಿ ತ್ಯಾಜ್ಯ ವಿಂಗಡನೆ ಮಾಡುವ ಉದ್ದೇಶದಿಂದ ಈ ಯೋಜನೆಗೆ ಚಾಲನೆ ನೀಡಲಾಗುತ್ತಿದೆ.

ಪ್ರತಿ ಡಬ್ಬ 200 ಲೀಟರ್ ಕಸ ಶೇಖರಣೆ ಮಾಡುವ ಸಾಮರ್ಥ್ಯ ಹೊಂದಿರುತ್ತದೆ ನಗರದ ಸ್ವಚ್ಚತೆ ಕಾಪಾಡುವ, ಪಾದಚಾರಿಗಳಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ತಡೆಯುವ ಮತ್ತು ಆರೋಗ್ಯದ ದೃಷ್ಟಿಯಿಂದ ಯೋಜನೆ ಜಾರಿಗೆ ಮಾಡಲಾಗುತ್ತಿದೆ

ಡಬ್ಬಗಳ ಖರೀದಿ ವೆಚ್ಚ…

ಪ್ರತಿ ಡಬ್ಬದ ದರ ರೂ.15423 ನೀಡಲಾಗಿದ್ದು ಒಟ್ಟು ಯೋಜನೆಯ ವೆಚ್ಚ ರೂ.3.44 ಕೋಟಿಯಷ್ಟಾಗಿದೆ. ಇನ್ನು  ಡಬ್ಬಗಳನ್ನು ಅಳವಡಿಕೆಗಾಗಿ ಪ್ರತಿ ಜೋಡಿ ಡಬ್ಬಕ್ಕೆ ರೂ.3200 ಒಟ್ಟು 2232 ಡಬ್ಬಗಳಿಗೆ 71.42 ಲಕ್ಷ ಖರ್ಚಾಗಿದೆ.

ಚಾಲನೆ ನೀಡಿದ ಬಳಿಕ ಮಾತನಾಡಿದ ಮೇಯರ್  ಪದ್ಮಾವತಿ, ಬೆಂಗಳೂರನ್ನು ಇನ್ನಷ್ಟು ಸುಂದರಗೊಳಿಸಲು ಈ ಯೋಜನೆ ಮಾಡಲಾಗಿದೆ. ಮುಖ್ಯಮಂತ್ರಿಗಳು ಬೆಂಗಳೂರಿನ ಸ್ಚಚ್ಚತೆ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಅಂಗಡಿ ಮುಂಗಟ್ಟುಗಳ ಮುಂದೆ ಕಸ ವಿಲೇವಾರಿ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಆದ್ರಿಂದ ಅಂಗಡಿ ಮಾಲಿಕರು ಈ ಡಸ್ಟ್ ಬಿನ್ ಗಳ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ನಿಮ್ಮ ಸಹಕಾರ ಅತ್ಯಮೂಲ್ಯವಾಗಿದೆ ಎಂದರು.

ಪರಿಸರ ಪ್ರೇಮಿ ಸರ್ಕಾರ ನಮ್ಮದು –ಕೆಜೆ ಜಾರ್ಜ್

ಇದೇ ವೇಳೆ ಸಚಿವ ಕೆ.ಜೆ ಜಾರ್ಜ್ ಮಾತನಾಡಿ, ನಮ್ಮದು ಪರಿಸರ ಪ್ರೇಮಿ ಸರ್ಕಾರವಾಗಿದೆ. ಈ ಹಿಂದೆ ಕಸದ ತೊಟ್ಟಿಗಳಿಂದ ಸೌಂದರ್ಯ ಹಾಳಾಗಿ ವಾಸನೆ ಬರುತ್ತಿತ್ತು.ಆದ್ರಿಂದ ಮನೆಗಳಿಂದ ಕಸ ಸಂಗ್ರಹಣೆ ಮಾಡಲು ಸರ್ಕಾರ ನಿರ್ಧರಿಸಲಾಯ್ತು ಎಂದರು.

ಪೌರಕಾರ್ಮಿಕರ ಸಂಬಳ ಮತ್ತು ಕಾಂಟ್ರಾಕ್ಟ್ ವಿರೋಧದ ಬೇಡಿಕೆಗಳ ಪ್ರತಿಭಟನೆ ಬಗ್ಗೆ ನಾಳೆ ಸಭೆ ಕರೆದು ತೀರ್ಮಾನ ಕೈಗೊಳ್ಳುವುದಾಗಿ ಸ್ಪಷ್ಟನೆ. ಕಸ ವಿಲೆವಾರಿ ಸಂಬಂದ ಪಟ್ಟಹಾಗೆ  ಕ್ರಮ ಕೈಗೊಳ್ಳಲಾಗ್ತಿದೆ ಕಲ್ಲು ಮೈನಿಂಗ್ ಒಳಪಟ್ಟಿರುವ ಪ್ರದೇಶಗಳನ್ನು ಟ್ರೀ ಪಾರ್ಕ್ ಮತ್ತು ಆಟದ ಮೈದಾನ ಮಾಡಲು ಬಿಡಿಎ ಗೆ  ಆದೇಶಿಸಲಾಗಿದೆ   ಎಂದರು

Key words:  dump bins -collection -garbage collections -Nagroothana Project.