ಆಸೀಸ್ ಮತ್ತು ಭಾರತ ನಡುವಿನ 3ನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯ….

0
1559
Draw -3rd Test match -between -Australia - India ....

ರಾಂಚಿ,ಮಾ,20,2017(www.justkannada.in): ಆಸ್ಟ್ರೇಲಿಯಾ ಮತ್ತು  ಭಾರತ ನಡುವೆ ನಡೆದ ಮೂರನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.

ರಾಂಚಿಯ ಜೆಎಸ್ಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ  ನಡೆದ  3ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 451ಕ್ಕೆ ಆಲ್ ಔಟ್ ಆಗಿತ್ತು. ಬಳಿಕ  ಕೊಹ್ಲಿ ಪಡೆ ಮೊದಲ ಇನ್ನಿಂಗ್ಸ್ ನಲ್ಲಿ 603ರ 9 ವಿಕೆಟ್ ಕಲೆದುಕೊಂಡು ಡಿಕ್ಲೇರ್ ಮಾಡಿತ್ತು.

ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿದ ಸ್ಮಿತ್ ಪಡೆ 204ಕ್ಕೆ 6 ವಿಕೆಟ್ ಕಳೆದುಕೊಂಡಿದ್ದು, ಈ ಮೂಲಕ ಪಂದ್ಯ ಡ್ರಾ ಆಗಿದೆ. 2ನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ಪರ ಹ್ಯಾಂಡ್ಸಕಂಬ್ 72 ರನ್ ಗಳಿಸಿದರು. ಭಾರತದ ಪರ ರವೀಂದ್ರ ಜಡೆಜಾ 4 ವಿಕೆಟ್ , ಅಶ್ವಿನ್ ಹಾಗೂ ಇಶಾಂತ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು.

4 ಟೆಸ್ಟ್ ಪಂದ್ಯಗಳಲ್ಲಿ ಭಾರತ 1 ಹಾಗೂ ಆಸ್ಟ್ರೇಲಿಯಾ ಒಂದರಲ್ಲಿ ಜಯಸಾಧಿಸಿ ಸಮಬಲ ಕಾಯ್ದುಕೊಂಡಿವೆ. ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಕುತೂಹಲ ಮೂಡಿಸಿದ್ದು ಗೆಲವು ಯಾರಿಗೆ ಒಲಿಯಲಿದೆ ಕಾದು ನೋಡಬೇಕಿದೆ.

key words: Draw -3rd Test match -between -Australia – India ….