ಬ್ಯಾಂಕ್‌ನಿಂದ ಯಾರೂ ಸಾಲ ಪಡೆಯಬೇಡಿ; ವಿಡಿಯೋ ಮಾಡಿಟ್ಟು ಕ್ಯಾಬ್ ಚಾಲಕ ಆತ್ಮಹತ್ಯೆ

0
248

ಬೆಂಗಳೂರು:ಡಿ-7:(www.justkannada.in) ಅನಿಲ್ ಎಂಬ 27 ವರ್ಷದ ಓಲಾ ಕ್ಯಾಬ್ ಚಾಲಕ ಬ್ಯಾಂಕ್‌ನಿಂದ ಯಾರೂ ಸಾಲ ಪಡೆಯಬೇಡಿ. ಸಾಲದಿಂದಾಗಿಯೇ ಇಂದು ನಾನು ನೇಣು ಹಾಕಿಕೊಳ್ಳುತ್ತಿದ್ದೇನೆ ಎಂದು ಮೊಬೈಲ್‌ನಲ್ಲಿ ವಿಡಿಯೊ ರೆಕಾರ್ಡ್ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆನ್ನಿಗಾನಹಳ್ಳಿ ನಿವಾಸಿಯಾದ ಅನಿಲ್ ಮನೆಯ ತನ್ನ ಕೋಣೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಕ್ಯಾಬ್ ಚಾಲಕ. ಆತ್ಮಹತ್ಯೆಗೂ ಮುನ್ನ ಒಂದು ನಿಮಿಷ 19ಸೆಕೆಂಡ್ ಗಳ ವಿಡಿಯೋ ಮಾಡಿಟ್ಟಿರುವ ಅನಿಲ್, ಹಾಯ್ ಫ್ರೆಂಡ್ಸ್. ನಾನು ಅನಿಲ್, ಮದ್ವೆ ಆಗೋಕೂ ಮುಂಚೆ ಎಲ್ರೂ ಯೋಚ್ನೆ ಮಾಡಿ. ಆ ಕಡೆ ಅಪ್ಪ-ಅಮ್ಮನನ್ನು ಬಿಡುವಂತಿಲ್ಲ. ಇನ್ನೊಂದು ಕಡೆ ಹೆಂಡತಿ-ಮಕ್ಕಳನ್ನು ಬಿಡುವಂತಿಲ್ಲ. ಈಗ ಸಾಲದ ಕಾರಣಕ್ಕೆ ನಾನು ಸಾಯುತ್ತಿದ್ದೇನೆ. ಬ್ಯಾಂಕ್‌ನವರು ಬಡ್ಡಿ ಬಡ್ಡಿ ಅಂತ ಸಾಯ್ತಾರೆ. ಇದು ಎಲ್ರಿಗೂ ಗೊತ್ತಾಗ್ಬೇಕು ಎಂಬ ಕಾರಣಕ್ಕೇ ಈ ನಿರ್ಧಾರ ತಗೊಂಡಿದೀನಿ. ದಯವಿಟ್ಟು ಯಾರೂ ಸಾಲದ ಸುಳಿಯಲ್ಲಿ ಸಿಕ್ಕಿ ಹಾಕೋಬೇಡಿ ಎಂದು ವಿಡಿಯೊ ರೆಕಾರ್ಡ್ ಮಾಡಿಟ್ಟಿದ್ದಾರೆ.

ಮತ್ತೊಂದು ವಿಡಿಯೊದಲ್ಲಿ, ಮನೆ ಕಟ್ಟೋಕೆ ಸಾಲ ಕೇಳ್ಕೊಂಡು ಬ್ಯಾಂಕ್‌ನವರ ಹತ್ತಿರ ಹೋಗ್ಬೇಡಿ. ಕಂಡೋರ ದುಡ್ಡು ತಿನ್ನೋಕ್ ಅಂತಾನೇ ಅವ್ರು ಇರೋದು. ರಾಜಕಾರಣಿಗಳನ್ನು ಸಹ ನಂಬಬೇಡಿ ಎಂದು ಅನಿಲ್ ತಿಳಿಸಿದ್ದಾರೆ.

ಮೃತ ಅನಿಲ್ ತಂದೆ ರಾಜಣ್ಣ ಮಗಗನ ಬಗ್ಗೆ ಪ್ರತಿಕ್ರಿಯೆ ನೀಡಿ, ಮನೆ ಕಟ್ಟುವ ಸಲುವಾಗಿ ಎಂಟು ವರ್ಷಗಳ ಹಿಂದೆ ಎಸ್‌ಬಿಐನ ನಾಗಾವರಪಾಳ್ಯ ಶಾಖೆಯಲ್ಲಿ 4 ಲಕ್ಷ ಸಾಲ ಪಡೆದಿದ್ದೆವು. ಆರಂಭದಲ್ಲಿ ಶೇ 8ರಷ್ಟು ಬಡ್ಡಿ ವಸೂಲಿ ಮಾಡುತ್ತಿದ್ದ ಬ್ಯಾಂಕ್‌ನವರು, ಕ್ರಮೇಣ ಅದನ್ನು ಶೇ 12ಕ್ಕೆ ಏರಿಸಿದ್ದಾರೆ. ತಿಂಗಳಿಗೆ 6,800 ಕಟ್ಟಬೇಕಿತ್ತು ಎಂದು ಹೇಳಿದರು. ಎರಡು ಕಂತುಗಳನ್ನು ಕಟ್ಟಲು ಆಗಿರಲಿಲ್ಲ. ಈ ಕಾರಣಕ್ಕೆ ಸೋಮವಾರ ಮನೆ ಹತ್ತಿರ ಬಂದು ಗಲಾಟೆ ಮಾಡಿದ್ದ ಬ್ಯಾಂಕ್ ಅಧಿಕಾರಿಗಳು, ‘ಮನೆಯನ್ನು ಹರಾಜು ಕೂಗುತ್ತೇವೆ’ ಎಂದು ಬೆದರಿಸಿ ಹೋಗಿದ್ದರು. ಅಲ್ಲದೆ, ನಿತ್ಯವೂ ಮಗನಿಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದರು. ಎಂಟು ವರ್ಷಗಳಿಂದ ಸಾಲ-ಬಡ್ಡಿ ಕಟ್ಟುತ್ತ ಬಂದಿದ್ದರೂ, ‘ಇನ್ನೂ 4.70 ಲಕ್ಷ ರೂ ಸಾಲ ಪಾವತಿಸುವುದು ಬಾಕಿ ಇದೆ ಎಂದಿದ್ದರು. ಇದೇ ಬೇಸರದಲ್ಲಿ ಮಗ ಆತ್ಮಹತ್ಯೆ ಮಾಡಿಕೊಂಡಿದ್ದು, ಬ್ಯಾಂಕ್ ಅಧಿಕಾರಿಗಳ ವಿರುದ್ಧ ಪೊಲೀಸರು ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
DON’T TAKE LOANS, SAYS CABBIE, AND THEN KILLS HIMSELF
A 27-year-old driver, working with a travel agency, committed suicide after having made a two-minute video in which he accuses officials of a nationalised bank in Baiyyappanahalli of harassing him over repayment of a loan. Officials from the bank said the man was not its customer. The Baiyyappanahalli police, who registered the case, identified the victim as Anil Kumar, a resident of Benniganahalli.