ಲೈಂಗಿಕ ತಜ್ಞವೈದ್ಯರೊಂದಿಗೆ ಪ್ರಶ್ನೋತ್ತರ

ಪ್ರಶ್ನೆ 1: ನನಗೆ 31 ವರ್ಷ. ವರ್ಷದ ಹಿಂದೆ ಮದುವೆಯಾಗಿದ್ದೇನೆ. ಸಂಭೋಗ ವೇಳೆ ತೀವ್ರ ನೋವು ಅನುಭವಿಸುತ್ತಿರುವುದರಿಂದ ಪತಿ ಜತೆಗೆ ಲೈಂಗಿಕ ಸಂಬಂಧವನ್ನೇ ಬಿಟ್ಟಿದ್ದೇನೆ. ನಾವು ಪ್ರೀತಿ ಪ್ರೇಮಕ್ಕೊಳಗಾದಾಗ ನನ್ನ ಹೊಟ್ಟೆಯ ಕೆಳಗಿನ ಭಾಗ ಗಟ್ಟಿಯಾದ ಅನುಭವವಾಗುತ್ತದೆ. ಹಾಗಾಗಿ ಕಾಮಕೇಳಿಗೂ ನಾನು ಅವಕಾಶ ನೀಡುತ್ತಿಲ್ಲ. ಈ ಬಗ್ಗೆ ಆನ್ ಲೈನ್ ನಲ್ಲಿ ಚೆಕ್ ಮಾಡಿದಾಗ ಇದೊಂದು ಯೋನಿಸಂಕೋಚನ ಸಮಸ್ಯೆ ಎಂದು ತಿಳಿದುಕೊಂಡೆ. ನನಗೂ ಈ ಸಮಸ್ಯೆ ಕಾಡುತ್ತಿದೆಯೇ ಎಂಬ ಭೀತಿ ಕಾಡುತ್ತಿದೆ. ನಾನು ಸ್ತ್ರೀರೋಗ ತಜ್ಞರನ್ನು ಕಂಡು ಪರಿಹಾರ ಕೇಳಲು ಭಯಪಡುತ್ತಿದ್ದೇನೆ. ಈ ಭಯದಿಂದ ಹೊರಬರುವುದು ಹೇಗೆ ಮತ್ತು ಲೈಂಗಿಕ ಜೀವನ ಸುಧಾರಿಸುವುದು ಹೇಗೆ ?femmes_sexualite_vagin

ವೈದ್ಯರ ಉತ್ತರ: ನಿಮಗೇನು ಭಯ ? ಕೆಲವು ನಿಮಿಷಗಳಲ್ಲಿ ನೋವು ಕಡಿಮೆಯಾಗುತ್ತದೆ. ನಿಮಗೆ ಋತುಸ್ರಾವವಾದಾಗ ಆದಷ್ಟು ದೀರ್ಘಕಾಲ ಈ ನೋವು ಇರುವುದಿಲ್ಲ. ಭಯಪಡುವ ಕಾರಣದಿಂದ  ಶಿಶ್ನ ಹಾಯುವ ಯೋನಿಯೊಳಗೆ ಪ್ರವೇಶಿಸಿದಾಗ ಸ್ನಾಯು ಸಂಕೋಚನವಾಗುತ್ತದೆ. ಇದನ್ನು ಯೋನಿಸಂಕೋಚನ ಎಂದು ಕರೆಯಲಾಗುತ್ತದೆ. ಸ್ತ್ರೀರೋಗ ತಜ್ಞರನ್ನು ಕಂಡು ನಿಮ್ಮ ಸಮಸ್ಯೆಯನ್ನು ಹೇಳಿಕೊಳ್ಳಿ. ಅವರು ಪರಿಹಾರ ನೀಡುತ್ತಾರೆ. ಸೂಕ್ತ ಔಷಧೋಪಚಾರದಿಂದ ನಿಮ್ಮ ನೋವನ್ನು ಕಡಿಮೆ ಮಾಡಲು ಸಾಧ್ಯವಿದೆ.

ಪ್ರಶ್ನೆ 2: ನನಗೆ 63 ವರ್ಷ. ದೈಹಿಕವಾಗಿ ಯಾವುದೇ ಸಮಸ್ಯೆಗಳಿಲ್ಲ. ಆದರೆ ಈಚೆಗೆ ನನಗೆ ನಿಮಿರುವಿಕೆ ದೌರ್ಬಲ್ಯವಿದೆ. ಇದರ ಪರಿಹಾರಕ್ಕೆ ಯಾವುದೇ ಅಡ್ಡಪರಿಣಾಮವಿಲ್ಲದ ಯಾವುದಾದರೂ ಔಷಧಗಳಿವೆಯೇ ?

ವೈದ್ಯರ ಉತ್ತರ: ಎಲ್ಲ ಔಷಧಗಳಿಂದಲೂ ಅಡ್ಡ ಪರಿಣಾಮಗಳಿವೆ. ನೀವು ಸಿದ್ಧರಾಗಿವಿರುವೆಂದಾದರೆ ನಿಮ್ಮ ನಿಮಿರುವಿಕೆ ಶಕ್ತಿಯನ್ನು ಮರಳಿ ಪಡೆಯಲು ನಾನಾ ದಾರಿಗಳಿವೆ.

ಪ್ರಶ್ನೆ 2.  ನನಗೆ 22 ವರ್ಷ. ನಾನು 24 ವರ್ಷದ ಮಹಿಳೆಯ ಆಕರ್ಷಣೆಗೊಳಗಾಗಿದ್ದೇನೆ. ಆಕೆ ವಿವಾಹಿತೆಯಾಗಿದ್ದು, ಎರಡು ಮಕ್ಕಳಿವೆ. ಆಕೆ ಒಂದು ಬಾರಿ ನನಗೆ ಮುತ್ತಿಟ್ಟಿದ್ದು, ನಾನು ಆಕೆಯ ಪ್ರೀತಿಯ ಬಲೆಗೆ ಬಿದ್ದಿದ್ದೇನೆ. ಇಂತಹ ಸಂದರ್ಭದಲ್ಲಿ ನಾನೇನು ಮಾಡಬೇಕು ?

ವೈದ್ಯರ ಉತ್ತರ: ಆಕೆಯ ಕಿಸ್ ನ್ನು ವಾಪಸ್ ಮಾಡಿ ಗುಡ್ ಬೈ ಹೇಳಿ. ಇಂತಹ ಸಂಬಂಧದಿಂದ ನಾನಾ ಸಮಸ್ಯೆಗೆ ದಾರಿಯಾಗುತ್ತದೆ. ನಿಮ್ಮ ಮತ್ತು ಆಕೆಯ ನೆಮ್ಮದಿ ಹಾಳಾಗುತ್ತದೆ. ಆಕೆಯ ಸಂಸಾರ ಒಡೆಯುವ ಸಾಧ್ಯತೆಯಿದ್ದು, ಮುಂದೆ ಹಿಂಸಾಚಾರ ರೂಪ ಪಡೆಯಬಹುದು. ಇದರಿಂದ ಎಚ್ಚೆತ್ತು ಹೊರಬನ್ನಿ.