ಅಪಾರ್ಟ್ ಮೆಂಟ್ ನಿಂದ ಜಿಗಿದು ವೈದ್ಯರೊಬ್ಬರು ಆತ್ಮಹತ್ಯೆಗೆ ಶರಣು

0
634

ಬೆಂಗಳೂರು:ಮಾ-20:(www.justkannada.in)ವೈದ್ಯರೊಬ್ಬರು ಅಪಾರ್ಟ್ ಮೆಂಟ್ ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನಲ್ಲಿ ನಡೆದಿದೆ.

40 ವರ್ಷದ ಅಶೋಕ್ ರಾಜ್‌ಕೌಲ್‌ ಸಾವಿಗೆ ಶರಣಾದ ವೈದ್ಯರೆಂದು ತಿಳಿದುಬಂದಿದೆ. ಹೆಚ್ಎಸ್‌ಆರ್ ಲೇಔಟ್‌ನ 7ನೇ ಸೆಕ್ಟರ್‌‌ನಲ್ಲಿರುವ ಶೋಭಾ ಅಪಾರ್ಟ್‌ಮೆಂಟ್‌ನ 7 ನೇ ಮಹಡಿಯಿಂದ ಜಿಗಿದು ಅಶೋಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ಅಶೋಕ್ ರಾಜ್, ನಾರಾಯಣ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು. ಈ ಬಗ್ಗೆ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Doctor,commits suicide, jumping,apartment