ಮೈಸೂರು,ಜೂ,19,2017(www.justkannada.in): ಏಕಾಏಕಿ ಪತ್ನಿಯ ಮನೆಗೆ ಬಂದು ಆಕೆಯ ಕತ್ತಿಗೆ ಚಾಕುವಿನಿಂದ ಇರಿದು ಆಕೆಯನ್ನು ಕೊಲೆಗೈದು ಸ್ಥಳದಿಂದ ಪರಾರಿಯಾಗಿದ್ದ ವಿಚ್ಛೇದನ ಪತಿಯನ್ನು ನಗರದ ವಿದ್ಯಾರಣ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ.divorced husband –Arrest-strangled -death -wife

ಬಂಧಿತರನ್ನು ಕಾರ್ತಿಕ್ ಮತ್ತು ಸೀನ ಎಂದು ಗುರುತಿಸಲಾಗಿದೆ. ಈತ  ಜೂ.13ರಂದು  ಜೆಪಿನಗರದಲ್ಲಿನ ತನ್ನ ವಿಚ್ಛೇದಿತ ಪತ್ನಿ ಸುನೀತಾ ಮನೆಗೆ ತೆರಳಿ  ಆಕೆಯನ್ನು ಹತ್ಯೆಗೈದಿದ್ದನು. ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದ. ಆತನೇ ಕೊಲೆಗೈದಿರುವುದಕ್ಕೆ ಬಲವಾದ ಸಾಕ್ಷಿ ಕೂಡ ಲಭಿಸಿತ್ತು.

ಇದೀಗ ವಿದ್ಯಾರಣ್ಯಪುರಂ ಪೊಲೀಸರು ಕಾರ್ತಿಕ್ ಹಾಗೂ ಆತನಿಗೆ ಸಹಕರಿಸಿದ ಸೀನನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿದ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: divorced husband –Arrest-strangled -death -wife