ಎರಡು ಕಡೆಯಿಂದ ಚರ್ಚೆ ನಡೆದಿದೆ: ಮೂರು ದಿನದಲ್ಲಿ ತಜ್ಞರ ಸಮಿತಿ ರಚನೆ- ವೀರಶೈವ ಮುಖಂಡರ ಸಭೆ ಬಳಿಕ ಶಾಮನೂರು ಶಿವಶಂಕರಪ್ಪ ಹೇಳಿಕೆ…………

0
473
Discussion -two sides- Expert Committee -Shamanoor Shivashankarappa

ಬೆಂಗಳೂರು,ಅ,12,2017(www.justkannada.in): ಲಿಂಗಾಯತ ಇಲ್ಲವೆ ವೀರಶೈವ  ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ಇಂದು ನಗರದ ಕ್ಯಾಪಿಟಲ್ ಹೊಟೆಲ್ ನಲ್ಲಿ ವೀರಶೈವ ಮುಖಂಡರ ಸಭೆ ನಡೆಯಿತು.Discussion -two sides- Expert Committee -Shamanoor Shivashankarappa

ಖಾಸಗಿ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಸಚಿವ ಎಂ.ಬಿ ಪಾಟೀಲ್, ಶರಣ ಪ್ರಕಾಶ್ ಪಾಟೀಲ್, ವಿನಯ್ ಕುಲಕರ್ಣಿ, ನಿವೃತ್ತ ಐಎಎಸ್ ಅಧಿಕಾರಿ ಜಾಮದಾರ್,ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ, ವೀರಶೈವ ಮಹಾಸಭಾದ ಹಿರಿಯ ಉಪಾಧ್ಯಕ್ಷ ಎನ್. ತಿಪ್ಪಣ್ಣ, ಶಂಕರ್ ಬಿದರಿ ಉಪಸ್ಥಿತಿರಿದ್ದರು. ಸಭೆಯಲ್ಲಿ ಲಿಂಗಾಯತ ಇಲ್ಲವೆ ವೀರಶೈವ  ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ಚರ್ಚೆ ನಡೆಸಲಾಯಿತು.

ಸಭೆಯ ಬಳಿಕ ಮಾತನಾಡಿದ ಶಾಮನೂರು ಶಿವಶಂಕರಪ್ಪ, ಪ್ರತ್ಯೇಕ ಧರ್ಮದ ವಿಚಾರದ ಬಗ್ಗೆ ಎರಡು ಕಡೆಯಿಂದ ಚರ್ಚೆ ನಡೆದಿದೆ. ಎಲ್ಲರೂ ಒಪ್ಪಿ ಕೊಂಡಿದ್ದಾರೆ. ಮೂರು ದಿನದಲ್ಲಿ ತಜ್ನರ ಸಮಿತಿ ರಚನೆ ಮಾಡಲಿದ್ದು,ಅದರ ಪ್ರಕಾರ ಎಲ್ಲರೂ ಒಟ್ಟಾಗಿ ಹೋಗೋಣ ಎಂದು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಎಲ್ಲಾ ಪೀಠಗಳು ಸೇರಿ ಸಭೆ ನಡೆಸಿದ್ದೇವೆ. ೧೦ ಜನ ತಜ್ಞರ ಸಮಿತಿ ರಚನೆ ಮಾಡಲಾಗಿದ್ದು,ವಾರದೊಳಗೆ ತಜ್ಞರ ಸಮಿತಿ ವರದಿ ನೀಡಲಿದೆ. ವರದಿಯಂತೆ ಎಲ್ಲರೂ ಮುನ್ನಡೆಯುತ್ತೇವೆ ಎಂದು ಶಾಮನೂರು ಶಿವಶಂಕರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಸಭೆಯಲ್ಲಿ ನಡೆದ ಚರ್ಚೆ ಹೀಗಿದೆ…

ಸಭೆಯಲ್ಲಿ ಮಾತನಾಡಿದ ಶಂಕರ್ ಬಿದರಿ, ೧೯೫೭ ರಿಂದಲೂ ವೀರಶೈವ,ಲಿಂಗಾಯತದ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ೨೦೧೩ ರಲ್ಲಿ ಹಿಂದೂ ಧರ್ಮದ ಭಾಗ ಎಂದು ಒಪ್ಪಿಕೊಂಡಿದ್ದೇವೆ. ಎರಡೂ ಒಂದೇ ಅಂತ ಸಮುದಾಯ ಒಪ್ಪಿಕೊಂಡಿದೆ. ಎಲ್ಲರೂ ಸಹಿಯನ್ನ ಮಾಡಿದ್ದಾರೆ. ಸ್ವತಂತ್ರ ಧರ್ಮದ ಬಗ್ಗೆ ಮಾತ್ರ ನಾವು ಚರ್ಚೆ ಮಾಡಬೇಕಿದೆ ಎಂದರು.

ಈ ವೇಳೆ ಮಧ್ಯ ಪ್ರವೇಶಿಸಿದ ಮಹಸಾಭಾದ ಉಪಾಧ್ಯಕ್ಷ ತಿಪ್ಪಣ್ಣ, ವೀರಶೈವ,ಲಿಂಗಾಯತ ಒಂದೇ. ಆದರೆ ಪ್ರತ್ಯೇಕತೆ ಬೇಕಿಲ್ಲ ಎಂದರು.

ಶಂಕರ ಬಿದರಿ ಮಾತನಾಡಿ,  ವೀರಶೈವ ಬೇಕೋ, ವೀರಶೈವ ಲಿಂಗಾಯತ ಬೇಕೋ,ಅಥವಾ ಬರಿ ಲಿಂಗಾಯತ ಅಂತ ಕರೆಯಬೇಕೋ ಅದರ ಬಗ್ಗೆ ಎಲ್ಲರೂ ಒಮ್ಮತಕ್ಕೆ ಬನ್ನಿ ಎಂದು ಸಭೆಯಲ್ಲಿನ ಮುಖಂಡರಿಗೆ ಮನವಿ ಮಾಡಿದರು.

ಮಾತೆ ಮಹಾದೇವಿ ನೀಡುತ್ತಿರುವ ಅನಗತ್ಯ ಹೇಳಿಕೆ ವಿರುದ್ಧ ಸಭೆಯಲ್ಲಿ ಕೆಲವರ  ಅಸಮಧಾನ…

ಮಾತೆ ಮಹಾದೇವಿ ನೀಡುತ್ತಿರುವ ಅನಗತ್ಯ ಹೇಳಿಕೆ ವಿರುದ್ಧ ಸಭೆಯಲ್ಲಿ ಕೆಲವರು  ಅಸಮಧಾನ ಹೊರ ಹಾಕಿದರು. ಉತ್ತಮ ಸ್ಥಾನದಲ್ಲಿರುವವರು ಈ ರೀತಿ ಹೇಳಿಕೆಗಳನ್ನ ನೀಡಿದ್ರೆ ಹೇಗೆ. ಅನಗತ್ಯವಾಗಿ ನಮ್ಮ ಸಮುದಾಯದವ್ರನ್ನ ಅವ್ರು ದಿಕ್ಕು ತಪ್ಪಿಸುತ್ತಿದ್ದಾರೆ. ಮೊದಲು ಅವ್ರ ಹೇಳಿಕೆಗಳಿಗೆ ಕಡಿವಾಣ ಹಾಕಿ  ಎಂದು ಒಂದು ಬಣದ ಮುಖಂಡರ ಸಲಹೆ ನೀಡಿದರು

ಮಾತೆ ಮಹಾದೇವಿ ಪರ  ಬ್ಯಾಟ್ ಮಾಡಿದ ಮತ್ತೊಂದು ಬಣ, ಮಹಾದೇವಿ ಅವರು ಸರಿಯಾದ ಹೇಳಿಕೆಗಳನ್ನು ನೀಡಿದ್ದಾರೆ. ಅವರು ಯಾವುದೇ ಗೊಂದಲದ ಹೇಳಿಕೆ ನೀಡಿಲ್ಲ ಎಂದು ಉತ್ತರಿಸಿದರು. ಈ ನಡುವೆ ಸಭೆಯಲ್ಲಿ ಮಾತಿನ ಚಕಮಕಿ ಉಂಟಾಗಿ  ಗೊಂದಲವೇರ್ಪಟ್ಟಿತು.ಇದರ ಜತೆಗೆ  ಮಾತಿನ ಚಕಮಕಿ ವೇಳೆ ವಿನಯ್ ಕುಲಕರ್ಣಿ  ಸಭೆಯಿಂದ ಹೊರ ನಡೆದರು.

Key words: Discussion -two sides- Expert Committee -Shamanoor Shivashankarappa