ಹೊಸ ಪ್ರತಿಭೆಗಳೊಂದಿಗೆ ಹೊಸ ಪ್ಲಾನ್ ಶುರು ಮಾಡಿದ ಯೋಗರಾಜ ಭಟ್ರು !

0
431

ಬೆಂಗಳೂರು, ಡಿಸೆಂಬರ್ 06 (www.justkannada.in): ಯೋಗರಾಜ್ ಭಟ್  ಹೊಸ ಯೋಜನೆಗೆ ಕೈಹಾಕಿದ್ದಾರೆ. ಹೊಸ ಯೋಜನೆಗೆ ಭಟ್ರು ನಾಳೆ ಸಿಂಪಲ್ ಆಗಿ ಮುಹೂರ್ತ ನೆರವೇರಿಸಲಿದ್ದು ಇದೇ ಡಿಸೆಂಬರ್ 18ರಿಂದ ಚಿತ್ರದ ಕೆಲಸಗಳು ಪ್ರಾರಂಭವಾಗಲಿದೆ.

2018ರಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಜತೆ ಸಿನಿಮಾ ನಿರ್ದೇಶನ ಮಾಡಲಿದ್ದು ಈ ನಡುವೆ ಸುಮ್ಮನೆ ಕೂರಲು ಮನಸ್ಸಾಗದ ಭಟ್ರು ಯೋಗರಾಜ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು ಇನ್ನು ಶೀರ್ಷಿಕೆ ಪಕ್ಕಾ ಆಗಿಲ್ಲ.

ಭಟ್ರ ಹೊಸ ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ಸಂಯೋಜಿಸಲಿದ್ದು ಸುಘ್ನಾನ್ ಅವರ ಛಾಯಾಗ್ರಹಣವಿರಲಿದೆ. ಸುಘ್ನಾನ್ ಭಟ್ರು ಜೋಡಿಗೆ ಇದು ಮೂರನೇ ಚಿತ್ರ ಇದಕ್ಕೂ ಮುನ್ನ ದನ ಕಾಯೋನು ಮತ್ತು ಮುಗುಳು ನಗೆ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದರು. ನವ ಪ್ರತಿಭೆಗಳೊಂದಿಗೆ ಚಿತ್ರ ಮಾಡಲು ಭಟ್ರು ರೆಡಿಯಾಗಿದ್ದು ಅದಕ್ಕಾಗಿ ಆಡಿಷನ್ ನಡೆಸಿದ್ದಾರೆ. ಒಂದು ರೀತಿಯಲ್ಲಿ ಈ ಚಿತ್ರ ಭಟ್ರ ಹಳೆಯ ಸ್ಟೈಲ್ ನೆನಪಾಗಲಿದೆ.