ಶ್ರೀಲಂಕಾ ವಿರುದ್ಧದ ಮೊಹಾಲಿ ಪಂದ್ಯದ ಬಳಿಕ ದೋನಿ ನಿವೃತ್ತಿ !

0
883

ಮೊಹಾಲಿ, ಡಿಸೆಂಬರ್ 06 (www.justkannada.in): ಪ್ರಸ್ತುತ ಟೀಂ ಇಂಡಿಯಾದ ಪ್ರವಾಸಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಆಡುತ್ತಿದ್ದು ಆ ನಂತರ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.

ಏಕದಿನ ಸರಣಿಯ 2ನೇ ಪಂದ್ಯ ಮೊಹಾಲಿಯಲ್ಲಿ ನಡೆಯುತ್ತಿದ್ದು ಈ ಪಂದ್ಯದ ಬಳಿಕ ಧೋನಿಯ ನಿವೃತ್ತಿ ಸಂಭ್ರಮವೂ ಸಾಗಲಿದೆ. ಆದರೆ ಇದು ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿವೃತ್ತಿಯಲ್ಲ.

ಕಳೆದ 10 ವರ್ಷಗಳಿಂದ ಮೊಹಾಲಿ ಪೊಲೀಸ್ ನಲ್ಲಿ ಸೇವೆಯಲ್ಲಿರುವ ಶ್ವಾನ ‘ಧೋನಿ’ 2ನೇ ಏಕದಿನದ ಬಳಿಕ ಸೇವೆಯಿಂದ ನಿವೃತ್ತಿಯಾಗಿದೆ. ಲ್ಯಾಬ್ರಡಾರ್ ತಳಿಯ ಧೋನಿ, ಮೂರು ವರ್ಷವಿರುವಾಗಲೇ ಮೊಹಾಲಿ ಪೊಲೀಸ್ ಇಲಾಖೆಗೆ ಹಲವು ಶೋಧ ಕಾರ್ಯಗಳಲ್ಲಿ ನೆರವಾಗಿದೆ. ಧೋನಿ ಜತೆ ಜಾನ್ ಹಾಗೂ ಪ್ರೀತಿ ಹೆಸರಿನ ಶ್ವಾನಗಳೂ ನಿವೃತ್ತಿಯಾಗುತ್ತಿದ್ದು ಬಳಿಕ ಇವುಗಳನ್ನು ದತ್ತು ನೀಡಲಾಗುತ್ತದೆ.