ಮೋದಿ ಯೋಜನೆ ತಾಳ ತಪ್ಪಿದೆ; ಅಂತ್ಯದ ಆರಂಭವಾಗಿದೆ: ನೋಟ್ ಬ್ಯಾನ್ ಕ್ರಮದ ವಿರುದ್ಧ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಿಡಿ

0
331

manmohan-singhನವದೆಹಲಿ:ಜ-11:(www.justkannada.in)ಪ್ರಧಾನಿ ನರೇಂದ್ರ ಮೋದಿಯವರ ನೋಟ್ ಬ್ಯಾನ್ ಕ್ರಮವನ್ನು ತೀಕಿಸಿರುವ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ದೇಶಾದ್ಯಂತ ಅರ್ಥ ವ್ಯವಸ್ಥೆ ಇಗಾಗಲೇ ಕೆಟ್ಟ ಪರಿಸ್ಥಿತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್ ಆಯೋಜಿಸಿದ್ದ ಜನವೇದನಾ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೋಟು ನಿಷೇಧದಿಂದ ಉಂಟಾಗುವ ವಿನಾಶಕಾರಿ ಪರಿಣಾಮಗಳ ಕುರಿತಾಗಿ ಜಾಗೃತಿ ಮೂಡಿಸಿವುದು ನನ್ನ ಕರ್ತವ್ಯ ಎಂದರು.

ನೋಟು ಹಿಂಪಡೆತ ನಿರ್ಧಾರ ದೇಶಕ್ಕೆ ದೊಡ್ಡ ಹೊಡೆತ ನೀಡಿದೆ. ಕಳೆದ ಎರಡು ತಿಂಗಳಲ್ಲಿ ಕೆಟ್ಟ ಪರಿಣಾಮಗಳನ್ನು ದೇಶ ಎದುರಿಸಿದೆ, ಇನ್ನು ಕೆಟ್ಟ ಪರಿಣಾಮಗಳು ಇನ್ನಷ್ಟೇ ಬರಬೇಕಿದೆ. ಕೇವಲ ತಪ್ಪು ಅಂಕೆಸಂಖ್ಯೆಗಳನ್ನು ಮುಂದು ಮಾಡಿ ಪ್ರಚಾರ ಮಾಡುತ್ತಿರುವ ಪ್ರಧಾನಿ ಮೋದಿ ಅವರ ಯೋಜನೆ ತಾಳ ತಪ್ಪಿದೆ ಎಂದು ಕಿಡಿಕಾರಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ಭಾರತದ ರಾಷ್ಟ್ರೀಯ ವೇತನ ಹೆಚ್ಚಿದೆ ಎಂಬ ಪ್ರಚಾರ, ಸುಳ್ಳಾಗಿದೆ. ದೇಶದ ಅಭಿವೃದ್ಧಿ ಕೆಲವೇ ತಿಂಗಳುಗಳಲ್ಲಿ 7.65 ನಿಂದ 7% ಕುಸಿದು, ಜಿಡಿಪಿ ಕೂಡ ತೀವ್ರ ಕುಸಿತ ಕಂಡಿದೆ. ದೇಶದಲ್ಲಿ ಆಮೂಲಾಗ್ರ ಬದಲಾವಣೆ ತರುವುದಾಗಿ ಮೋದಿಜಿ ಭರವಸೆ ನೀಡಿದ್ದರು. ಆದರೆ ಅವರ ಲೆಕ್ಕಾಚಾರಗಳಿಂದ ಅಂತ್ಯದ ಅರಂಭವಾಗಿದೆ ಎಂದು ಹೇಳಿದರು.

Demonetisation,Manmohan Singh,slams Modi govt