ದೀಪಿಕಾ-ಪ್ರಿಯಾಂಕ ಇಬ್ಬರಲ್ಲಿ ಒಬ್ಬರಿಗೆ ವೆಸ್ಟ್ ಇಂಡೀಸ್ ಕ್ರಿಕೆಟರ್ ರಸೆಲ್ ಮ್ಯೂಜಿಕ್ ಆಲ್ಬಂನಲ್ಲಿ ಚಾನ್ಸ್ !

0
1796

ನವದೆಹಲಿ, ಏಪ್ರಿಲ್ 15 (www.justkannada.in): ಉದ್ದೀಪನ ಮದ್ದು ಸೇವಿಸಿದ್ದಕ್ಕೆ ಒಂದು ವರ್ಷ ಕ್ರಿಕೆಟ್​ನಿಂದ ನಿಷೇಧ ಶಿಕ್ಷೆಗೆ ಒಳಗಾಗಿರುವ, ಕಳೆದ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದ ವೆಸ್ಟ್ ಇಂಡೀಸ್ ಆಟಗಾರ ಆಂಡ್ರೆ ರಸೆಲ್ ಸಂಗೀತ ಕ್ಷೇತ್ರದಲ್ಲಿ ಮಿಂಚು ಹರಿಸಲು ಸಿದ್ಧರಾಗುತ್ತಿದ್ದಾರೆ.

‘ಹಾಡುಗಾರನಾಗಿ ಸಂಗೀತ ಕ್ಷೇತ್ರ ಪ್ರವೇಶಿಸುತ್ತಿರುವುದು ನಿಜ. ಕ್ರಿಕೆಟ್​ಗೆ ಅಲ್ಪ ವಿರಾಮ ಬಿದ್ದಿರುವುದರಿಂದ ಈ ಸಮಯ ಮತ್ತು ಸಂಪನ್ಮೂಲವನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದೇನೆ’ ಎಂದು 28 ವರ್ಷದ ಜಮೈಕಾದ ಆಟಗಾರ ಹೇಳಿದ್ದಾರೆ.

ಎಂದೆಂದಿಗೂ ಕ್ರಿಕೆಟ್​ಗೆ ನನ್ನ ಮೊದಲ ಆದ್ಯತೆ. ಇದರ ಜೊತೆಗೆ ನೃತ್ಯ ಮತ್ತು ಹಾಡುಗಾರಿಕೆಯೂ ನನಗೆ ಇಷ್ಟ. ಸಂಗೀತ ನಮ್ಮ ರಕ್ತದಲ್ಲೇ ಇದೆ. ಸಂಗೀತಕ್ಕೆ ಸಂಬಂಧಿಸಿದಂತೆ ವೆಸ್ಟ್ ತಂಡದ ಸಹ ಆಟಗಾರ ಡ್ವೇನ್ ಬ್ರಾವೊ ಅವರಿಂದ ಸಲಹೆಗಳನ್ನು ಪಡೆದುಕೊಳ್ಳುತ್ತಿದ್ದೇನೆ ಎಂದಿದ್ದಾರೆ ರಸೆಲ್.

ಇದೇ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡುತ್ತಿದ್ದು, ನನ್ನ ಮೊದಲ ವಿಡಿಯೊ ಆಲ್ಬಂ ಒಂದರಲ್ಲಿ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ ಅಥವಾ ಪ್ರಿಯಾಂಕಾ ಚೋಪ್ರಾ ಅವರನ್ನು ತೋರಿಸಲು ಇಚ್ಛಿಸಿದ್ದು, ಅವರ ಜೊತೆ ಮಾತುಕತೆ ನಡೆಸಲಿದ್ದೇನೆ’ ಎಂದು ಹೇಳಿದ್ದಾರೆ.