ಕಿಕ್-2 ನಲ್ಲಿ ಸಲ್ಮಾನ್ ಖಾನ್ ಜೊತೆ ದೀಪಿಕಾ ಪಡುಕೊಣೆ

0
1841

ಮುಂಬೈ, ಸೆಪ್ಟೆಂಬರ್ 16 (www.justkannada.in): ಮುಂದಿನ ವರ್ಷ ಸಲ್ಮಾನ್ ಖಾನ್ ಅವರ ‘ರೇಸ್-3’ ಮತ್ತು ‘ಕಿಕ್-2’ ಚಿತ್ರಗಳು ತೆರೆ ಮೇಲೆ ಬರಲಿದೆ. ವಿಶೇಷ ಅಂದ್ರೆ ಕಿಕ್-2 ನಲ್ಲಿ ದೀಪಿಕಾ ಪಡುಕೊಣೆ ಸಲ್ಮಾನ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ರೇಸ್-3 ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಜಾಕ್ವೇಲಿನ್ ಫೆರ್ನಾಂಡಿಸ್ ಅಭಿನಯಿಸುತ್ತಿದ್ದರೆ, ಕಿಕ್-2 ಚಿತ್ರದಲ್ಲಿ ಯಾರು ನಟಿಸಲಿದ್ದಾರೆ ಎನ್ನುವ ಚರ್ಚೆ ಬಾಲಿವುಡ್ ಅಂಗಳದಲ್ಲಿ ಶುರುವಾಗಿತ್ತು. ಆ ಕುತೂಹಲಕ್ಕೀಗ ಬ್ರೇಕ್ ಬಿದ್ದಿದೆ. ದೀಪಿಕಾ ಪಡುಕೋಣೆ ಕಿಕ್-2 ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರ ಮುಂದಿನ ವರ್ಷ ಸೆಟ್ಟೆರಲಿದೆ ಎಂದು ಹೇಳಲಾಗುತ್ತಿದೆ.

2014ರಲ್ಲಿ ಬಿಡುಗಡೆಗೊಂಡ ಕಿಕ್ ಚಿತ್ರದ ಮೊದಲನೇ ಭಾಗದಲ್ಲಿ ಜಾಕ್ವೇಲಿನ್ ನಟಿಸಿ ಸಾಕಷ್ಟು ಜನಪ್ರಿಯರಾದರು.
ಕಿಕ್-2 ಚಿತ್ರಕ್ಕೆ ಎಲ್ಲಾ ತಯಾರಿಗಳು ನಡೆಸಿಕೊಂಡಿದ್ದು ಶೀಘ್ರದಲ್ಲೇ ಚಿತ್ರೀಕರಣ ಶುರು ಆಗಲಿದೆ. ಈ ಚಿತ್ರದಲ್ಲಿ ಸಲ್ಮಾನ್ ಜೊತೆ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದನ್ನು ಮೂಲಗಳು ಖಚಿತಪಡಿಸಿವೆ.

ಅಂದಹಾಗೆ ಸಲ್ಮಾನ್ ಖಾನ್ ನಟಿಸುತ್ತಿರುವ ‘ಟೈಗರ್ ಜಿಂದಾ ಹೇ’ ಚಿತ್ರ ಈ ವರ್ಷದ ಕ್ರಿಸ್‍ಮಸ್ ದಿನದಂದು ಬಿಡುಗಡೆಯಾಗಲಿದೆ. ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್‍ನ ಬಿಗ್ ಬಜೆಟ್ ಸಿನಿಮಾಗಳು ಮುಂದಿನ ವರ್ಷ ಸಾಲುಸಾಲಾಗಿ ಬರಲಿದೆ.