ಲಾರಿ ಹರಿದು ಬಾಲಕ ಸಾವು……

0
588
death-young-boy-tearing-trucking

ರಾಯಚೂರು,ಮಾ,20,2017(www.justkannada.in): ರಾಯಚೂರು.ನಗರದ ಗೊಶಾಲಾ ರಸ್ತೆಯಲ್ಲಿ ಬೆಳ್ಳಂ ಬೆಳಿಗ್ಗೆ ಲಾರಿ ಹರಿದು ಬಾಲಕ ಮೃತಪಟ್ಟ ಘಟನೆ ನಡೆದಿದೆ.

ಗೊಶಾಲೆ ರಸ್ತೆಯಲ್ಲಿರುವ ಅಂಗಡಿಗಳಿಗೆ ಪೇಪರ್ ಹಾಕಲು ತೆರಳುತ್ತಿದ್ದ ಬಾಲಕನಿಗೆ ಇಂದು ಬೆಳಿಗ್ಗೆ ಹಿಂದಿನಿಂದ ಬಂದ ಲಾರಿ ಬಾಲಕನ ಮೇಲೆ ಹರಿದ ಪರಿಣಾಮ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಇನ್ನು ಘಟನೆಯಲ್ಲಿ ಮೃತಪಟ್ಟ ಬಾಲಕನ್ನುಜಲಾಲ್ ನಗರದ ನಿವಾಸಿ ಉಮೇಶ್ (12) ಎಂದು ಹೇಳಲಾಗುತ್ತಿದೆ. ದುರ್ಘಟನೆಗೆ ಕಾರಣನಾದ ಲಾರಿ ಚಾಲಕ ಲಾರಿ ಸಮೇತ ಪರಾರಿಯಾಗಿದ್ದಾನೆ ಎನ್ನಲಾಗುತ್ತಿದೆ.

ಮಾರ್ಕೆಟ್ ಯಾರ್ಡ್  ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲಿಸಿ ಶವ ಪರೀಕ್ಷೆಗಾಗಿ ಮೃತದೇಹವನ್ನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

Key words: death -young boy -tearing -trucking .