ವಿದ್ಯುತ್ ದುರಸ್ತಿ ವೇಳೆ  ಶಾಕ್ ಹೊಡೆದು ಕಂಬದಲ್ಲೇ ಕಾರ್ಮಿಕ ಸಾವು: ಗುತ್ತಿಗೆದಾರನಿಗೆ ಸಾರ್ವಜನಿಕರಿಂದ ಥಳಿತ…

0
676
death-shock-power-repaired

ಹುಬ್ಬಳ್ಳಿ,ಆ,11,2017(www.justkannada.in) ದುರಸ್ತಿ ವೇಳೆ ವಿದ್ಯುತ್  ಪ್ರವಹಿಸಿ  ಕಾರ್ಮಿಕ ಕಂಬದಲ್ಲಿಯೇ ದಾರುಣವಾಗಿ ಸಾವನ್ನಪ್ಪಿದ ಘಟನೆ ನಗರದ ಹುಬ್ಬಳ್ಳಿಯಲ್ಲಿ ನಡೆದಿದೆ.death-shock-power-repaired

ನಗರದ ಕಾರವಾರ ರಸ್ತೆಯಲ್ಲಿನ ಭಾಷಲ್ ಮಿಶನ್ ಶಾಲೆಯ ಬಳಿ ಈ ಘಟನೆ ನಡೆದಿದೆ. ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಮೂಲದ ಶಂಕರಗೌಡ (27) ಮೃತ ಲೈನ್ ಮೆನ್. ಗುತ್ತಿಗೆದಾರನ ಬಳಿ ಕೆಲಸ ಮಾಡುತ್ತಿದ್ದ ಶಂಕರಗೌಡ  ಇಂದು ಕಂಬ ಏರಿ ಕೆಲಸ ಮಾಡುತ್ತಿರುವಾಗ ವಿದ್ಯುತ್ ಪ್ರವಹಿಸಿ ಕಂಬದಲ್ಲೇ ಅವರು ಮೃತಪಟ್ಟಿದ್ದಾರೆ. ಈ ಘಟನೆಗೆ ಹೆಸ್ಕಾ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ.

ಮುಂಜಾಗ್ರತಾ ಕ್ರಮವಿಲ್ಲದೆ ಕೆಲಸ ಮಾಡಿಸಿದ ಆರೋಪದ ಮೇಲೆ ಸಾರ್ವಜನಿಕರು ಗುತ್ತಿಗೆದಾರ ತಾಜುದ್ದಿನ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಆತನನ್ನ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ. ವಿದ್ಯುತ್ ದುರಸ್ತಿಗೆ ಕಳುಹಿಸಿದ ಅಧಿಕಾರಿಗಳು ಏಕಾಏಕಿಯಾಗಿ ವಿದ್ಯುತ್ ಹರಿಬಿಟ್ಟಿದ್ದಾರೆ. ಇದಕ್ಕೆ ಹೆಸ್ಕಾಂನ‌ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.

ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಈ ಸಂಬಂಧ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Key words: death -shock -power -repaired