ಬೆಂಗಳೂರು, ಮಾರ್ಚ್ 15 (www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಭಾರಿ ನಿರೀಕ್ಷೆಯ ಚಕ್ರವರ್ತಿ ಸಿನಿಮಾ ಏಪ್ರಿಲ್ ತಿಂಗಳಲ್ಲಿ ರಿಲೀಸ್ ಆಗಲಿದೆ.

ಇದಕ್ಕೂ ಮುನ್ನ ಯುಗಾದಿಗೆ ಚಕ್ರವರ್ತಿ ಟ್ರೈಲರ್ ಬಿಡುಗೆಡಯಾಗಲಿದೆ. ಚಕ್ರವರ್ತಿ ಸಿನಿಮಾವನ್ನ ಚಿರಂತ್ ನಿರ್ದೇಶಿಸುತ್ತಿದ್ದಾರೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು. ಸಿನಿಮಾ ಪ್ರಮೋಷನ್ ಟ್ರೈಲರ್ ಸಿದ್ಧ ಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಸಿನಿಮಾದಲ್ಲಿ ದರ್ಶನ್ ಅವರನ್ನು 3 ಶೇಡ್ ಗಳಲ್ಲಿ ತೋರಿಸಲಾಗುತ್ತದೆ. ದರ್ಶನ್ ಪಾತ್ರದ ಪರಿಚಯ ಮಾಡಿಸುವ 2 ನಿಮಿಷಗಳ ಟ್ರೈಲರ್ ಅಭಿಮಾನಿಗಳಿಗಾಗಿ ಕಾಯುತ್ತಿದೆ ಎಂದು ಚಿರಂತ್ ತಿಳಿಸಿದ್ದಾರೆ. ಸಿನಿಮಾದ ಸ್ಯಾಟಲೈಟ್ ಮತ್ತು ಹಿಂದಿ ಡಬ್ಬಿಂಗ್ ರೈಟ್ಸ್ ಈಗಾಗಲೇ ಮಾರಾಟವಾಗಿದೆ. ಚಕ್ರವರ್ತಿ ಸಿನಿಮಾದ ಹಂಚಿಕೆಯನ್ನು ದರ್ಶನ್ ಸಹೋದರ ದಿನಕರ್ ಮತ್ತು ಮಲ್ಲಿಕಾರ್ಜುನ್ ಅವರಿಗೆ ನೀಡಲಾಗಿದೆ.