ಡಬ್ಬಿಂಗ್ ಚಿತ್ರ ಪ್ರದರ್ಶನ ತಡೆಯುವುದು ಶಿಕ್ಷಾರ್ಹ ಅಪರಾಧ: ಸುಪ್ರೀಂ ಕೋರ್ಟ್

0
721
observed -Court -management -drought; -summons -chief secretaries -11 states ....

ನವದೆಹಲಿ, ಮಾರ್ಚ್ 18 (www.justkannada.in): ಡಬ್ ಮಾಡಲ್ಪಟ್ಟ ಚಲನಚಿತ್ರಗಳನ್ನು ಅಥವಾ ಟಿವಿ ಧಾರಾವಾಹಿಗಳ ಪ್ರದರ್ಶನವನ್ನು ತಡೆಯಲು ಯತ್ನಿಸುವರನ್ನು 2002ರ ಸ್ಪರ್ಧಾ ಕಾಯ್ದೆಯ ಉಲ್ಲಂಘನೆಗಾಗಿ ತಪ್ಪಿತಸ್ಥರೆಂಬುದಾಗಿ ಪರಿಗಣಿಸಲಾಗುವುದು ಹಾಗೂ ಇದು ಶಿಕ್ಷಾರ್ಹ ಅಪರಾಧ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಡಬ್ಬಿಂಗ್ ಪರ ವಿರೋಧ ಚರ್ಚೆ ತಾರಕಕ್ಕೇರುತ್ತಿರುವ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ನ ಈ ತೀರ್ಪು ಕರ್ನಾಟಕದಲ್ಲಿ ಡಬ್ಬಿಂಗ್ ಚಿತ್ರಗಳ ಪ್ರದರ್ಶನದ ವಿರುದ್ಧ ನಡೆಯುತ್ತಿರುವ ಚಳವಳಿಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಹಿಂದಿಯಿಂದ ಬಂಗಾಳಿಗೆ ಡಬ್ ಮಾಡಲಾದ ಮಹಾಭಾರತ ಟಿವಿ ಧಾರಾವಾಹಿಯನ್ನು , ಪ.ಬಂಗಾಳದ ವಿವಿಧ ಟಿವಿ ವಾಹಿನಿಗಳಲ್ಲಿ ಪ್ರಸಾರ ಮಾಡುವುದನ್ನು ಪ.ಬಂಗಾಳದ ಕಲಾವಿದರು ಹಾಗೂ ತಂತ್ರಜ್ಞರ ಸಂಘ ಹಾಗೂ ಈಶಾನ್ಯಭಾರತ ಚಲನಚಿತ್ರ ಸಂಘ (ಇಐಎಂಪಿಎ) ಬಲವಾಗಿ ವಿರೋಧಿಸಿ, ಕೋರ್ಟ್ ಮೇಟ್ಟಿಲೇರಿದ್ದರು. ಈ ಕುರಿತು ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ ಈ ಮಹತ್ವದ ತೀರ್ಪು ನೀಡಿದೆ.